Breaking
27 Jul 2025, Sun

ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ “ಕುಪ್ಪೆಟ್ಟು ಬರ್ಕೆ” ಪ್ರತಿಷ್ಠಾ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ದಕ್ಷಿಣ ಕನ್ನಡ ಹಾಗೂ ಉಡುಪಿ ಜೆಲ್ಲೆಯ ಸಾವಿರಾರು ಮನೆಗಳಲ್ಲಿ ಆರಾಧಿಸಿಕೊಂಡು ಬಂದಿರುವ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ದೈವಗಳ ಪ್ರತಿಷ್ಠಾ ಮಹೋತ್ಸವವು 2025 ಪೆಬ್ರವರಿ 18 ರಿಂದ 22 ರವರೆಗೆ ಜರಗಲಿದ್ದು ಇದರ ಆಮಂತ್ರಣ ಪತ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇತ್ತೀಚಿಗೆ ಸಿದ್ದಕಟ್ಟೆ ನಾರಾಯಣ ಗುರು ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ನಂತರ ಮಾತಾನಾಡಿ ಸುಮಾರು 400-500 ವರ್ಷಗಳ ಇತಿಹಾಸ ವಿರುವ ಕುಪ್ಪೆಟ್ಟು ಪಂಜುರ್ಲಿ ಮೂಲ ಸ್ಥಾನವು ಭಕ್ತರೆಲ್ಲರ ಆಶಯದಂತೆ ದೈವನುಗ್ರಹದಿಂದ ಜೀರ್ಣದ್ದೋರ ಗೊಂಡು ಪ್ರತಿಷ್ಠಾ ಮಹೋತ್ಸವ ಜರಗಲಿರುವುದು ಇಡೀ ತುಳುನಾಡಿಗೆ ಐತಿಹಾಸಿಕ ಕ್ಸಣ ವಾಗಿದ್ದು ಕುಪ್ಪೆಟ್ಟು ಪಂಜುರ್ಲಿ ದೈವಗಳ ಭಕ್ತರು ಈ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಪಾಲ್ಗೊಂಡು ದೈವಗಳ ಕ್ರಪೆಗೆ ಪಾತ್ರರಾಗಬೇಕು ಎಂದೂ ವಿನಂತಿ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೀತಾಂಜಲಿ ಸುವರ್ಣ ಮಾತಾನಾಡುತ್ತ ಈ ಕುಪ್ಪೆಟ್ಟು ಪಂಜುರ್ಲಿ ಮೂಲ ಸ್ಥಾನ ಕ್ಕೂ ನಮ್ಮ ಕುಟುಂಬಕ್ಕೂ ನಿಕಟ ಸಂಬಂಧ ಇದೆ. ಈ ನಿಟ್ಟಿನಲ್ಲಿ ಈ ಕ್ಷೆತ್ರವು ಅಭಿವೃದ್ಧಿಗೊಳ್ಳುತ್ತಿದ್ದು ಕುಪ್ಪೆಟ್ಟು ಪಂಜುರ್ಲಿ ದೈವ ವು ಕರಾವಳಿ ಜಿಲ್ಲೆಯಲ್ಲಿ ಅಂದಾಜು ಸುಮಾರು 5000 ಮನೆಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವುದು ಸಮೀಕ್ಷೆ ಯಿಂದ ತಿಳಿದು ಬಂದಿದ್ದು ಆರಾಧನೆ ಮಾಡಿಕೊಂಡು ಬರುತ್ತಿರುವ ಎಲ್ಲಾ ಭಕ್ತ ಸಮೂಹದ ಜನರು ಮೂಲ ಸ್ಥಾನಕ್ಕೆ ಭೇಟಿ ನೀಡಿ ದೈವಗಳ ಗಂಧ ಪ್ರಸಾದ ಪಡೆದುಕೊಂಡು ಪುನೀತ ರಾಗಬೇಕು ಎಂದೂ ವಿನಂತಿಸಿದರು.

ವೇದಿಕೆಯಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಸನೀಲ್ ಕುಪ್ಪೆಟ್ಟು, ಜೀರ್ಣದ್ದೋರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಹೊರೆಕಾಣಿಕೆ ಸಮಿತಿ ಸಂಚಾಲಕ ದೇವಪ್ಪ ಕರ್ಕೇರ ಉಪಸ್ಥಿತರಿದ್ದರು.ಸಭೆಯಲ್ಲಿ ಪ್ರಮುಖರಾದ ರತ್ನಕುಮಾರ್ ಚೌಟ, ರಶ್ಮಿತ್ ಶೆಟ್ಟಿ, ನಿತ್ಯಾನಂದ ಪೂಜಾರಿ ಕೆಂತಲೆ,ಸತೀಶ್ ಪೂಜಾರಿ, ಸಂತೋಷ ರಾಯಿಬೆಟ್ಟು ಸಂತೋಷ ಕುಮಾರ್ ಚೌಟ ಸಿದ್ದಕಟ್ಟೆ,ಚಂದ್ರಹಾಸ ಶೆಟ್ಟಿಗಾರ್ ಸಂಗಬೆಟ್ಟು,ವಾಮನ ಬುಣ್ಣನ್, ಪರಮೇಶ್ವರ್ ಪೂಜಾರಿ ರಾಯಿ,ಜಗದೀಶ್ ಕೊಯಿಲ, ರಾಜೇಂದ್ರ ಪೂಜಾರಿ, ಜಯ ಪೂಜಾರಿ ಕುಪ್ಪೆಟ್ಟು, ಉಮೇಶ್ ಪೂಜಾರಿ ಕುಪ್ಪೆಟ್ಟು. ನವೀನ್ ಪೂಜಾರಿ, ರತ್ನಾಕರ್ ಪೂಜಾರಿ, ಪ್ರವೀಣ್ ಕುಪ್ಪೆಟ್ಟು,ಮತ್ತಿತರರು ಉಪಸ್ಥಿತರಿದ್ದರು.ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಸುವರ್ಣ ರಾಯಿ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *