Breaking
19 Sep 2026, Sat

ಬಂಟ್ವಾಳ: ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಇನ್ನೊಂದು ಲಾರಿ: ಚಾಲಕ ಅಪಾಯದಿಂದ ಪಾರು

ಬಂಟ್ವಾಳ: ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಬಂದು ಡಿಕ್ಕಿ ಹೊಡೆದ ಘಟನೆ ಕಲ್ಲಡ್ಕ ಮೇಲ್ಸತುವೆಯಲ್ಲಿ ಆ.13ರಂದು ‌ನಡೆದಿದೆ.

ಚಾಲಕ ಉಪ್ಪಿನಂಗಡಿ ನಿವಾಸಿ ಖಲೀಲ್ ಎಂಬಾತ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು, ತಕ್ಷಣವೇ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಕಂಪೆನಿಯೊಂದರ ಐಸ್ ಕ್ರೀಮ್ ಸಾಗಿಸುವ ಪ್ರೀಝರ್ ವಾಹನ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಲಾರಿಯೊಂದು ಕಲ್ಲಡ್ಕ ಪ್ಲೈ ಓವರ್ ಮೇಲೆ ಕೆಟ್ಟು ನಿಂತಿದ್ದು, ಲಾರಿ ಚಾಲಕನಿಗೆ ಮುಂಜಾನೆ ವೇಳೆ ಕಣ್ಣಿಗೆ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಕಲ್ಲಡ್ಕದ ಈ ನೂತನ ಪ್ಲೈ ಓವರ್ ನಲ್ಲಿ ಕಾಮಗಾರಿ ಇನ್ನೂ ಕೂಡ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಬೀದಿ ದೀಪಗಳ ಅಳವಡಿಕೆಯಾಗಿಲ್ಲ ಮತ್ತು ಕೆಟ್ಟು ನಿಂತ ಲಾರಿಗೆ ಯಾವುದೇ ಸೂಚನ ಫಲಕ ಕೂಡ ಅಳವಡಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿವೆ.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *