Breaking
19 Sep 2026, Sat

ಧರ್ಮಸ್ಥಳ ದೇವಸ್ಥಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಗೃಹ ಸಚಿವರಾದ ಅಮಿತ್ ಷಾ ಅವರಿಗೆ ಮನವಿ ಸಲ್ಲಿಸಿದ ಪ್ರಭಾಕರ ಪ್ರಭು

ಧರ್ಮಸ್ಥಳ ದೇವಸ್ಥಾನದ ಮೂಲ ಆಶಯಯಕ್ಕೆ ಧಕ್ಕೆಯಾಗದಂತೆ ಕರ್ನಾಟಕ ಗೃಹ ಇಲಾಖೆಗೆ ಸೂಚಿಸಲು ಭಾರತ ಸರಕಾರ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರಿಗೆ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರು ಪ್ರಭಾಕರ ಪ್ರಭು ಮನವಿ ಸಲ್ಲಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಸಿದ್ದ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಸಮೀಪದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ,ಕೊಲೆಗಳಿಗೆ ಸಂಬಂಧಪಟ್ಟಂತೆ ಅನಾಮಿಕನೊಬ್ಬನು ದೇವಸ್ಥಾನದ ಹತ್ತಿರದ ಜಾಗದಲ್ಲಿ ಮಣ್ಣಿನ ಅಡಿಯಲ್ಲಿ ಶವಗಳನ್ನು ಹೂತುಹಾಕಲಾಗಿದೆ ಎಂಬುದಾಗಿ ನೀಡಿದ ದೂರಿನ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡಿದ ಇಲ್ಲ ಸಲ್ಲದ ಅಪಪ್ರಚಾರದಿಂದ ಜಿಲ್ಲೆಯ ಭಕ್ತರಲ್ಲಿ ತೀವ್ರ ತರದ ಗೊಂದಲ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸತ್ಯಸತ್ಯಾತೆಯನ್ನು ಕಂಡುಕೊಳ್ಳಲು ರಾಜ್ಯಸರಕಾರವು ಎಸ್ಐ .ಟಿ ತನಿಖೆಗೆ ಆದೇಶಿಸಿರುತ್ತದೆ . ಇದರಂತೆ ಎಸ್.ಐ.ಟಿ ತಂಡದಿಂದ ಅನಾಮಿಕ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಶೋಧ ಕಾರ್ಯ ಸಾಗುತ್ತಿದ್ದು ಕೆಲವೊಂದು ಕಡೆಗಳಲ್ಲಿ ಶವದ ಅವಶೇಷಗಳು ಸಿಕ್ಕಿರುವ ಬಗ್ಗೆ ಮೂಲಗಳಿಂದ ತಿಳಿದಿಬಂದಿದೆ . ಈ ಎಲ್ಲಾ ತನಿಖೆಗಳು ಪಾರದರ್ಶಕವಾಗಿ ,ಮುಕ್ತವಾಗಿ ನಡೆದು ತಪ್ಪಿತಸ್ಥರು ಎಂದು ಕಂಡು ಬರುವ ಯಾರೇ ಆಗಲೀ ಕಾನೂನು ಪ್ರಕಾರ ಶಿಕ್ಷೆಯಾಗಲೆ ಬೇಕೆಂದು ಈ ಮೂಲಕ ಒತ್ತಾಯಪಡಿಸುತ್ತೇನೆ.

ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾದಿತವಾಗದ ನಿಷೇಧಿತ ಎಸ್.ಡಿ.ಪಿ.ಐ ಸಂಘಟನೆ ,ಕೆಲವೊಂದು ಹಿಂದೂಯೇತರ ಸಂಘಟನೆಯ ಪ್ರಮುಖರು , ಎಡಫಂಥೀಯರು ,ಹಿಂದೂ ನಾಸ್ತಿಕರು, ರಾಷ್ಟ್ರ ವಿರೋಧಿಗಳ ಪರವಾಗಿ ನ್ಯಾಯಲಯಗಳಲ್ಲಿ ವಾದಿಸುವ ನ್ಯಾಯವಾದಿಗಳು ,ಈ ಪ್ರಕರಣವನ್ನು ತಿರುಚಿಕೊಂಡು ಇಡೀ ಧರ್ಮಸ್ಥಳ ದೇವಸ್ಥಾನದ ಪಾವಿತ್ರ್ಯತೆ ಮತ್ತು ನೇರವಾಗಿ ವಿರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ಧರ್ಮಸ್ಥಳದಲ್ಲಿರುವ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಬಗ್ಗೆ ಅಪನಂಬಿಕೆ ಬರುವಂತೆ ಸಾರ್ವಜನಿಕರಲ್ಲಿ ಬಿಂಬಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಜಿಲ್ಲೆಯ ಹಿಂದೂ ಸಮಾಜದಲ್ಲಿ ನಾನಾ ರೀತಿಯ ಅಭಿಪ್ರಾಯ ಭೇದಗಳು ಪ್ರಾರಂಭವಾಗುತ್ತಿದ್ದು ಅಲ್ಲಲ್ಲಿ ಪರವಿರೋಧವಾದ ಚರ್ಚೆಗಳು ನಡೆಯುತ್ತಿದ್ದು ಘರ್ಷಣೆಗಳು ಉಲ್ಬಣಗೊಳ್ಳುವ ಸಂಭವವಿದೆ .

ಈ ಹಿನ್ನಲೆಯಲ್ಲಿ ಎಸ್. ಐ. ಟಿ. ತನಿಖೆಯ ತೀರ್ಪು ಪ್ರಕಟಿಸುವ ಮೊದಲು ಧರ್ಮಸ್ಥಳದ ದೇವಸ್ಥಾನದ ಬಗ್ಗೆ ಅಪಪ್ರಚಾರ ,ಅಪನಂಬಿಕೆ ,ಸೃಷ್ಟಿಸುತ್ತಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಧಾರ್ಮಿಕ ಕೇಂದ್ರ , ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಮೇಲಿರುವ ಭಯ ಭಕ್ತಿಗಳಿಗೆ ,ಧಾರ್ಮಿಕ ವಿಧಿವಿಧಾನಗಳಿಗೆ ,ಪರಂಪರಗತವಾದ ಕಟ್ಟುಪಾಡುಗಳಿಗೆ ಧಕ್ಕೆಯಾಗದಂತೆ ಹಾಗೂ ಧರ್ಮಧಿಕಾರಿ ಡಾIವಿರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನ , ಟೀಕೆ ,ಬಹಿರಂಗ ಬೈಯುವಿಕೆ ಮಾಡದಂತೆ ರಾಜ್ಯಸರಕಾರ ನೇಮಿಸಿದ ಎಸ್ ಐ ಟಿ ತಂಡವು ಎಚ್ಚರಿಕೆ ವಹಿಸಿಕೊಂಡು ಅತ್ಯಾಚಾರ , ಕೊಲೆ , ಹೂತಿಟ್ಟ ಶವಗಳ ಶೋಧನಾ ಪ್ರಕರಣವನ್ನು ಸೂಕ್ಷ್ಮತೆಯಲ್ಲಿ ತನಿಖೆ ನಡೆಸುವಂತೆ ರಾಜ್ಯ ಗೃಹ ಇಲಾಕೆಗೆ ಸೂಕ್ತ ನಿರ್ದೇಶನ ನೀಡುವುದರೊಂದಿಗೆ ಧರ್ಮಸ್ಥಳದ ಬಗ್ಗೆಗಿನ ವಿವಿಧ ರೀತಿಯಲ್ಲಿ ಸೃಷ್ಟಿಯಾಗುತ್ತಿರುವ ಸುದ್ದಿಗಳಿಗೆ ತಿಲಂಜಾಲಿ ಹಾಕಿ ಪ್ರಕರಣವನ್ನು ಅಂತ್ಯ ಕಾಣಿಸಬೇಕು ಎಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ .

Leave a Reply

Your email address will not be published. Required fields are marked *