Breaking
22 Aug 2026, Sat

ಅದ್ಯಪಾಡಿ ನೀಲಕಂಠ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಾರಾಯಣ

ಬಂಟ್ವಾಳ: ಶ್ರೀ ರುದ್ರ ಪಾರಾಯಣ ಸಮಿತಿ ಬಂಟ್ವಾಳ ವತಿಯಿಂದ ಅದ್ಯಪಾಡಿ ಕ್ಷೇತ್ರದ ನೀಲಕಂಠ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ–ಚಮಕ ಪಾರಾಯಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಶ್ರೀ ರುದ್ರ ನಮಕ–ಚಮಕದೊಂದಿಗೆ ಗಣಪತಿ ಸೂಕ್ತ, ಸೌರ ಸೂಕ್ತ, ದೇವಿ ಸೂಕ್ತ, ಆಗಮರ್ಷಣ ಸೂಕ್ತ ಹಾಗೂ ವೇದ ಸೂಕ್ತಗಳ ಪಾರಾಯಣವನ್ನು ನಡೆಸಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಮಾರ್ಗದರ್ಶನ ನೀಡಿದರು. ದೇವಸ್ಥಾನದ ಅರ್ಚಕರಾದ ಕೃಷ್ಣ ಭಟ್ ಹಾಗೂ ನರಸಿಂಹ ಭಟ್ ಉಪಸ್ಥಿತರಿದ್ದರು. ಅಲ್ಲದೆ ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀನಿವಾಸ ಹೊಳ್ಳ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಎಸ್‌ಡಿಎಂ ಕಾಲೇಜು ಉಜಿರೆಯ ಉಪನ್ಯಾಸಕ ರವಿಶಂಕರ ಕಾರಂತ, ಎಂ. ಶಾಂತರಾಮ ರಾವ್, ಎನ್. ರಾಮಚಂದ್ರ ಮೈಯ್ಯ, ಎಂ. ಜಯರಾಮ ಮೈಯ್ಯ, ಚಂದ್ರಮೋಹನ ರಾವ್, ಮಿಥುನ್ ರಾವ್, ಅರ್ಬಿ ಕೃಷ್ಣ ಸೋಮಯಾಜಿ, ಕೆ. ರಾಜಾರಾಮ ಐತಾಳ, ಲಕ್ಷ್ಮೀಶ ಭಟ್ ಹಾಗೂ ಮಂಜುನಾಥ ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *