ಮೈಸೂರು: ರಂಗಚಂದ್ರಮ ಪ್ರತಿಷ್ಠಾನ ತಂಡ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್ ಕಿರುಚಿತ್ರದ ಮಹೂರ್ತ ಸಮಾರಂಭವು ಜೂನ್ 28 ರಂದು ಮೈಸೂರಿನ ಹೂಟಗಳ್ಳಿಯ ಕೆಎಚ್‌ಬಿ ಬಡಾವಣೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ರಂಗಚಂದ್ರಮ ಪ್ರತಿಷ್ಠಾನದ ಅಧ್ಯಕ್ಷ ಧನಪಾಲ್ ಜೆ. ಗೌಡ, ಪ್ರಧಾನ ಕಾರ್ಯದರ್ಶಿ ಪರಮೇಶ್ ಎಸ್., ಗೌರವಾಧ್ಯಕ್ಷ ಜಯಚಂದ್ರ, ತಂಡದ ಸದಸ್ಯರಾದ ಎಂ.ಸಿ. ದೇವರಾಜಪ್ಪ, ಕೃಷ್ಣಮೂರ್ತಿ ರಾವ್ ಜಿ.ವಿ., ರಕ್ತದಾನಿ ಮಂಜು, ಎಂ.ಕೆ. ಯೋಗೀಶ್, ಕಲಾವಿದರಾದ ಕುಮಾರಿ ಇಂಚರ, ಕುಮಾರಿ ನಿಸರ್ಗ, ಕಿರಣ್, ಆಕಾಶ್ ಫ್ರಾನ್ಸಿಸ್ ಹಾಗೂ ಸಂಗೀತ ನಿರ್ದೇಶಕ ಜಸ್ಟಿನ್ ಮಾರ್ಕ್ ಡಿಸೋಜಾ ಉಪಸ್ಥಿತರಿದ್ದರು.






