Breaking
27 Jun 2026, Sat

ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ವಿರೋಧಿ ದಿನ: ಮಂಜೇಶ್ವರ ಸ್ನೇಹಾಲಯದಲ್ಲಿ ಜಾಗೃತಿ ಕಾರ್ಯಕ್ರಮ

ಮಂಜೇಶ್ವರ: ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಮಂಜೇಶ್ವರದ ಸ್ನೇಹಾಲಯ ವ್ಯಸನಮುಕ್ತ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ, ಚಿಕಿತ್ಸೆ ಹಾಗೂ ಪುನರ್ವಸತಿಯ ಮಹತ್ವವನ್ನು ಒತ್ತಿಹೇಳಲಾಯಿತು.

ಕಾರ್ಯಕ್ರಮವು ಕ್ಲಿನಿಕಲ್ ವಿಭಾಗದ ಮುಖ್ಯಸ್ಥ ಶ್ರೀ ಕ್ಲಿಂಟ್ ಜೋಸೆಫ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ವೈದ್ಯಾಧಿಕಾರಿ ಹಾಗೂ ಮನೋವೈದ್ಯರಾದ ಡಾ. ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ, ಮಾದಕ ವಸ್ತುಗಳ ದುರುಪಯೋಗವನ್ನು ತಡೆಗಟ್ಟಲು ಸಮಾಜದ ಸಮೂಹಿಕ ಪ್ರಯತ್ನಗಳ ಅಗತ್ಯವನ್ನು ವಿವರಿಸಿದರು.


ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಶುಭಾಶಯ ಭಾಷಣ ಮಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಕುಟುಂಬ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಟ್ರಸ್ಟಿ ಹಾಗೂ ಕಾರ್ಯದರ್ಶಿ ಶ್ರೀಮತಿ ಒಲಿವಿಯಾ ಕ್ರಾಸ್ತಾ, ಟ್ರಸ್ಟಿ ಶ್ರೀ ಜೋವಿಯಲ್ ಕ್ರಾಸ್ತಾ, ಟ್ರಸ್ಟಿ ಹಾಗೂ ಆಡಳಿತಾಧಿಕಾರಿನಿ ಕುಮಾರಿ ಸರಿತಾ ಕ್ರಾಸ್ತಾ, ಸಂಸ್ಥೆಯ ಉಸ್ತುವಾರಿ ಶ್ರೀಮತಿ ಲವಿಟ ಡಿ’ಸೋಜಾ ಮತ್ತು ಯೋಗ ಹಾಗೂ ವೆಲ್ನೆಸ್ ತರಬೇತುದಾರರಾದ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕೇಂದ್ರದ ನಿವಾಸಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆ ಹಾಗೂ ಚೇತರಿಕೆಯ ಪಯಣವನ್ನು ಹಂಚಿಕೊಂಡರು. ಜೊತೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಕ್ವಿಜ್, ಪ್ರಬಂಧ ಬರವಣಿಗೆ, ಕವನ ರಚನೆ ಹಾಗೂ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು.


ಕೊನೆಯಲ್ಲಿ ಮನೋವೈದ್ಯಕೀಯ ಸಲಹೆಗಾರ ಶ್ರೀ ಆನಂದ್ ವಂದನಾರ್ಪಣೆ ಸಲ್ಲಿಸಿದರು.
ಈ ಕಾರ್ಯಕ್ರಮವು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಹಾಗೂ ಚೇತರಿಕೆಯ ಹಾದಿಯಲ್ಲಿರುವವರಿಗೆ ಬೆಂಬಲ ನೀಡುವ ಸ್ನೇಹಾಲಯದ ಬದ್ಧತೆಯನ್ನು ಪುನರುಚ್ಚರಿಸಿತು.

Leave a Reply

Your email address will not be published. Required fields are marked *