ಮಿತ್ತಬಾಗಿಲು: ಬೈಕ್ ಚಾಲಕನ ನಿಯಂತ್ರಣ ತಪ್ಪಿ, ನಿಂತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡದ ಪರಿಣಾಮ ಬೈಕ್ ಚಾಲಕ ಗಾಯಗೊಂಡಿರುವ ಘಟನೆ ಆ.12 ರ ರಾತ್ರಿ ಮಿತ್ತಬಾಗಿಲಿನ ಕೊಲ್ಲಿ ಸೇತುವೆ ಬಳಿ ನಡೆದಿದೆ.

ಗಾಯಗೊಂಡಿರುವ ವ್ಯಕ್ತಿಯನ್ನು ಕೊಪ್ಪದಗಂಡಿ ನಿವಾಸಿ ನವೀನ್ ಎಂದು ಗುರುತಿಸಲಾಗಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.




