Breaking
12 May 2026, Tue

ಸುಳ್ಯ: ಹಾವು ಕಡಿದು ಮಹಿಳೆ ಸಾವು

ಸುಳ್ಯ: ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ನಡೆದಿದೆ.

ಮೃತರನ್ನು ಕುಡೆಂಬಿ ಕುತ್ತಿಮುಂಡ ನಿವಾಸಿ ರಾಧಮ್ಮ(53) ಎಂದು ಗುರುತಿಸಲಾಗಿದೆ.

ರಾಧಮ್ಮ ಅವರು ಸ್ನಾನಕ್ಕೆ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿದೆ ಎನ್ನಲಾಗಿದೆ.

ಹಾವು ಕಡಿದಾಗ ಅವರ ಮನೆಯಲ್ಲಿ ಅವರ ಅತ್ತೆ ಮಾತ್ರ ಇದ್ದರು. ಬಳಿಕ ಸ್ಥಳೀಯರಿಗೆ ವಿಷಯ ತಿಳಿಸಿ, ಅವರೆಲ್ಲರೂ ಬಂದು ರಾಧಮ್ಮರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *