Breaking
17 Jul 2026, Fri

ಸುಳ್ಯ: ತೊಡಿಕಾನದಲ್ಲಿ ಕಾಡಾನೆಗಳ ದಾಳಿ: ಅಡಿಕೆ, ಬಾಳೆ ತೋಟಗಳಿಗೆ ಹಾನಿ

ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿಗೆ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.

ಗ್ರಾಮದ ಕದಳಿವನದ ಈಶ್ವರ ಭಟ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 75 ಅಡಿಕೆ ಮರಗಳು ಹಾಗೂ 250 ಬಾಳೆ ಗಿಡಗಳನ್ನು ನಾಶಪಡಿಸಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದಲ್ಲದೆ, ಸುತ್ತಮುತ್ತಲಿನ ಇತರ ರೈತರ ತೋಟಗಳಿಗೂ ನುಗ್ಗಿದ ಕಾಡಾನೆಗಳು ತೆಂಗು, ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟುಮಾಡಿವೆ.

Leave a Reply

Your email address will not be published. Required fields are marked *