ಮೈಸೂರು: ಸರ್ವಕಲ ಸೇವಾ ಟ್ರಸ್ಟ್ ಹಾಗೂ PGRSS ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹೊಸ ಗಾಯಕ-ಗಾಯಕಿಯರು ಹಾಗೂ ಮಕ್ಕಳ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರಮಟ್ಟದ “ಸಪ್ತಸ್ವರ ಕರೋಕೆ ಗಾಯನ ಸೀಸನ್ – 3” ಕಾರ್ಯಕ್ರಮವನ್ನು ದಿನಾಂಕ 31-05-2026 ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಮೈಸೂರಿನ ಹೂಟಗಳ್ಳಿ ಕೆ.ಎಚ್.ಬಿ ಬಡಾವಣೆಯ ಶ್ರೀ ಅನಂತೇಶ್ವರ ಭವನದಲ್ಲಿ (ಸುದರ್ಶನ್ ಸ್ಕೂಲ್ ಎದುರುಗಡೆ) ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ಶ್ರೀ ಪರಮಪೂಜ್ಯ ಶ್ರೀನಿವಾಸನ್ ಸ್ವಾಮೀಜಿಯವರು ವಹಿಸಲಿದ್ದು, ಶ್ರೀ ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿಗಳು ಆಧ್ಯಾತ್ಮಿಕ ಚಿಂತಕರು, ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ, ಉಡುಪಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾನ್ಯ ಮಾಜಿ ಸಚಿವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ. ದೇವೇಗೌಡ ರವರು ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ “ಸಪ್ತಸ್ವರ ಮೆಲೋಡಿಸ್” ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಮತಿ ಚಂದ್ರಿಕಾ ಸುರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀ ಮಹಾದೇವಪ್ಪ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶ್ರೀಮತಿ ಭಾಗ್ಯ ಶಿವಮೂರ್ತಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಬೆಳವಾಡಿ, ಶ್ರೀಮತಿ ನಾಗರತ್ನ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ಭಾಗ್ಯ ಮೊಬೈಲ್ ರಮೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಬೆಳವಾಡಿ, ಶ್ರೀಮತಿ ಭಾಗ್ಯ ಲೋಕೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಡಾ. ನಾಗರಾಜು ವಿ., ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್, ಮೈಸೂರು, ಶ್ರೀಮತಿ ಶ್ರೀದೇವಿ ರಾವ್, ವ್ಯವಸ್ಥಾಪಕ ನಿರ್ದೇಶಕರು, ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್, ಬೊಂಬೈ, ಶ್ರೀ ಎಂ.ಜೆ. ಕಿರಣ್ ಗೌಡ, ನಿಕಟ ಪೂರ್ವ ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ ಮೈಸೂರು, ಶ್ರೀ ಪುರುಷೋತ್ತಮ್ ಕೆ.ಸಿ., ಸೆಂಟರ್ ಹೆಡ್, ಕಿಯೋನಿಕ್ಸ್ ಯುವ ಕೋ ಪಾಂಡುಪುರ, ಲವ ಕುಮಾರ್, ಮುಖ್ಯ ಆರಕ್ಷಕರು, ವಿಜಯನಗರ ಪೊಲೀಸ್ ಠಾಣೆ, ಶ್ರೀ ಮಂಜುನಾಥ, ಅಧ್ಯಕ್ಷರು, ವಿಶ್ವೇಶ್ವರಯ್ಯ ಗೆಳೆಯರ ಬಳಗ, ಬಿಇಎಂಎಲ್ ಮೈಸೂರು, ಹಾಗೂ ಶ್ರೀ ಟಿ. ದಾಸೇಗೌಡ, ಅಧ್ಯಕ್ಷರು, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಕೆಎಚ್‌ಬಿ ಬಡಾವಣೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ರಾಷ್ಟ್ರಮಟ್ಟದಿಂದ ಅನೇಕ ಗಾಯಕ-ಗಾಯಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 11.00 ಗಂಟೆಗೆ ಗಣ್ಯರಿಂದ ದೀಪ ಬೆಳಗಿಸುವಿಕೆ ಹಾಗೂ ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷರಾದ ನೀಮಾ ಲೋಬೊ ರವರ ಅಧ್ಯಕ್ಷತೆಯಲ್ಲಿ “ಸಪ್ತಸ್ವರ ಮೆಲೋಡಿಸ್” ಸಂಸ್ಥೆಯ ಪೋಸ್ಟರ್ ಬಿಡುಗಡೆ ಸಮಾರಂಭ ಜರುಗಲಿದೆ.
ಪತ್ರಿಕಾ ಮಿತ್ರರು ಹಾಗೂ ಮೀಡಿಯಾ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಆಯೋಜಕರಾಗಿ ನೀಮಾ ಲೋಬೊ, ಜೋಸೆಫ್ ಲೋಬೊ, ರಕ್ತದಾನಿ ಮಂಜು ಹಾಗೂ ಅದು ಹರೀಶ್ ರವರು ಕಾರ್ಯನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9740176567
99021 75996
91643 02007


