Breaking
19 Sep 2026, Sat

ಅಡ್ಯಾರ್ : ಕರ್ತವ್ಯದ ಮಧ್ಯೆ ಬಸ್ ನಿರ್ವಾಹಕ ಕುಸಿದು ಬಿದ್ದು ಸಾವು

ಮಂಗಳೂರು : ಕಾಲೇಜು ಬಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಿರ್ವಾಹಕನೊಬ್ಬ ಕರ್ತವ್ಯ ನಿರ್ವಹಿಸುವಾಗಲೇ ಕುಸಿದು ಬಿದ್ದು ಮೃತಪಟ್ಟ ದುರ್ಘಟನೆ ಇಂದು ಬೆಳಗ್ಗೆ ಅಡ್ಯಾರ್ ಹತ್ತಿರ ನಡೆದಿದೆ.

ಮೃತ ದುರ್ದೈವಿಯನ್ನು ಕುತ್ತಾರು ಮೂಲದ ಸಂತೋಷ್ (40) ಎಂದು ಗುರುತಿಸಲಾಗಿದೆ.

ಸಂತೋಷ್ ನಿಟ್ಟೆ ವಿಶ್ವವಿದ್ಯಾನಿಲಯದ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಬೆಳಗಿನ ಟ್ರಿಪ್‌ನಲ್ಲಿ ಶಾಲಾ ಮಕ್ಕಳನ್ನು ಕರೆತರಲು ಹೊರಟಿದ್ದಾಗ, ಬಸ್ಸಿನೊಳಗೆ ವಿದ್ಯಾರ್ಥಿಗಳನ್ನು ಹತ್ತಿಸುವ ಸಂದರ್ಭದಲ್ಲಿ ಅವರು ಏಕಾಏಕಿ ಅಸ್ವಸ್ಥರಾಗಿ ನೆಲಕ್ಕುರುಳಿದರು.

ಘಟನೆಯ ನಂತರ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ, ಮಧ್ಯದಲ್ಲೇ ಅವರು ಮೃತಪಟ್ಟರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೃದಯಾಘಾತವೇ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *