Breaking
25 Sep 2026, Fri

ಮಡಿಕೇರಿ: ಕೊರಗಜ್ಜ ನೇಮೋತ್ಸವದಲ್ಲಿ ಕುಣಿದ ಬಾಲಕಿಯರು: ವೈರಲ್‌ ವಿಡಿಯೋ ಅಳಿಸುವಂತೆ ನೋಟೀಸ್‌

ಮಡಿಕೇರಿ: ಕೆಲವು ದಿನಗಳ ಹಿಂದೆ ಮಡಿಕೇರಿ ನಗರದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕೊರಗಜ್ಜನ ನೇಮೋತ್ಸವದಲ್ಲಿ, ಸ್ವಾಮಿ ದೈವ ನರ್ತನದ ವೇಳೆ ಐದು ಪುಟ್ಟ ಬಾಲಕಿಯರು ಭಕ್ತಿಯಿಂದ ಹೆಜ್ಜೆ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಶ್ರೀಧರ್ ಕಬತ್ತರ್ ಹಾಗೂ ಕೆಲ ಯೂಟ್ಯೂಬ್ ಚಾನೆಲ್‌ಗಳು ಮತ್ತು ಫೇಸ್‌ಬುಕ್ ಪೇಜ್‌ಗಳು ಹಂಚಿಕೊಂಡಿದ್ದು, ಇದಕ್ಕೆ ಅಶ್ಲೀಲ ಭಾಷೆಯಲ್ಲಿ ನಿಂದಿಸುವಂತೆ ಮಾಡಿದ್ದು ಇದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಮಾನಸಿಕವಾಗಿ ನೋವುಂಟಾಗಿದ್ದು, ಮಕ್ಕಳು ಶಾಲೆಗೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ತಕ್ಷಣ ಮಕ್ಕಳು ಇರುವ ವಿಡಿಯೋವನ್ನು ಅಳಿಸಲು ಹಾಗೂ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿದೆ. ಇಲ್ಲವಾದರೆ ಬಿಎನ್ಎಸ್ ಕಾಯ್ದೆ 96ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಂಘಟನೆ ನೀಡಿದೆ.

Leave a Reply

Your email address will not be published. Required fields are marked *