Breaking
8 Aug 2026, Sat

ಪ್ರತಾಪ್ ಸಿಂಹ ನಾಯಕ್‌ಗೆ ಬಿಜೆಪಿ ಯುವಮೋರ್ಚಾದಿಂದ ಸನ್ಮಾನ

ಬೆಳ್ತಂಗಡಿ: ವಿಧಾನ ಪರಿಷತ್ ಸದಸ್ಯತ್ವದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ವಿಧಾನಮಂಡಲ ಅಧಿವೇಶನಗಳಲ್ಲಿ ಪ್ರಬಲವಾಗಿ ಧ್ವನಿ ಎತ್ತಿದ ಬಿಜೆಪಿ ಹಿರಿಯ ಮುಖಂಡ ಪ್ರತಾಪ್ ಸಿಂಹ ನಾಯಕ್ ಅವರನ್ನು ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯರಾಗಿ ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಸದನದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಿ ಜನಪರವಾಗಿ ಸೇವೆ ಸಲ್ಲಿಸಿರುವುದನ್ನು ಯುವಮೋರ್ಚಾ ಪದಾಧಿಕಾರಿಗಳು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನೀತ್ ಕೋಟ್ಯಾನ್ ಸಾವ್ಯ, ಜಯಪ್ರಸಾದ್ ಗೌಡ ಕಡಮ್ಮಾಜೆ ಫಾರ್ಮ್ಸ್ ಮೊಗ್ರು, ಉಪಾಧ್ಯಕ್ಷರುಗಳಾದ ಗಣೇಶ್ ಆರ್ ಲಾಯಿಲ, ಹರೀಶ್ ಗೌಡ ಸಂಭೋಲ್ಯ, ಪ್ರಕಾಶ್ ಪೂಜಾರಿ ಬಾರ್ಯ, ಸುಜಿತ್ ಪೆರಾಡಿ, ಕಾರ್ಯದರ್ಶಿಗಳಾದ ಗಿರೀಶ್ ಗೌಡ, ಬಿ.ಕೆ. ಬಂದಾರು, ಸುಧೀರ್ ಪೂಜಾರಿ ಚಾರ್ಮಾಡಿ, ರಂಜು ಕೊಕ್ಕಡ, ಜಗದೀಶ್ ಕನ್ನಾಜೆ, ಕೋಶಾಧಿಕಾರಿ ಸ್ವಸ್ತಿಕ್ ಗೌಡ ಹಟತ್ತೋಡಿ-ಕುಕ್ಕಳ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ಅಶ್ವಿನ್ ಅಂಡಿಂಜೆ, ಪ್ರಸಾದ್ ಸುಧೇಮುಗೇರು, ಮನೀಷ್ ಡಿ. ಎ. ಧರ್ಮಸ್ಥಳ, ಜಯಕುಮಾರ್ ಶಿರ್ಲಾಲು, ಪವನ್ ಬಂಗೇರ ನಗರ, ಪ್ರದೀಪ್ ಕುಲಾಲ್ ಕಾಯರ್ತಡ್ಕ, ಸಂತೋಷ್ ಕುಮಾರ್ ಇಂದಬೆಟ್ಟು, ಹಾಗೂ ಮಹಾಶಕ್ತಿ ಪ್ರಮುಖರಾದ ಲೋಕ್ಷತ್ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *