ಬಂಟ್ವಾಳ: ಇಲ್ಲಿನ ಬದನಡಿ ಕ್ಷೇತ್ರದ ಸಮೀಪದ ಸಜಂಕಬೆಟ್ಟು ನಿವಾಸಿ, ಕೃಷಿ ಕಾರ್ಮಿಕ ವೆಂಕಪ್ಪ ಪೂಜಾರಿ (72) ಅವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.

ಕಳೆದ 25 ವರ್ಷಗಳಿಂದ ಕೃಷಿ ಚಟುವಟಿಕೆಗಳೊಂದಿಗೆ ಬದನಡಿ ಕ್ಷೇತ್ರದ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸ್ಥಳೀಯವಾಗಿ ಪರಿಚಿತರಾಗಿದ್ದರು.

ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಸ್ವಗೃಹದ ಸಮೀಪ ನೆರವೇರಿತು.



