ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ರಾಯಿ ಕ್ಲಸ್ಟರ್ ನೇತೃತ್ವದಲ್ಲಿ ವಾಮದಪದವು ವಲಯ ಮಟ್ಟದ ಕ್ರೀಡಾಕೂಟವು ಸೆ.21ರಂದು ಬಂಟ್ವಾಳದ ಎಸ್‌ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಎಲ್‌ಸಿಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರೌಢವಿಭಾಗದ 14 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

17ರ ವಯೋಮಾನದ ಬಾಲಕಿಯರ ಜಾವೆಲಿನ್ ಎಸೆತದಲ್ಲಿ ಧನ್ವಿತಾ ಪ್ರಥಮ ಸ್ಥಾನ ಪಡೆದರೆ, ಬಾಲಕರ ವಿಭಾಗದಲ್ಲಿ ಜಿರಾಗ್ ಕೆ.ಎಸ್. ಪ್ರಥಮ ಸ್ಥಾನ ಗಳಿಸಿದರು. ಆದ್ಯ ಜಿ.ಕೆ. ಹಾಗೂ ರಾಹೀದ್ ತೃತೀಯ ಸ್ಥಾನ ಪಡೆದರು.
ಗುಂಡು ಎಸೆತದಲ್ಲಿ ಅಪರ್ಣ ಶೆಟ್ಟಿ ದ್ವಿತೀಯ ಹಾಗೂ ರಾಹೀದ್ ತೃತೀಯ ಸ್ಥಾನ ಪಡೆದಿದ್ದಾರೆ. ಹರ್ಡಲ್ಸ್ ಓಟದಲ್ಲಿ ಶ್ರಾವಿತ್ ದ್ವಿತೀಯ ಸ್ಥಾನ ಗಳಿಸಿದರು. 800 ಮೀಟರ್ ಓಟದಲ್ಲಿ ಅಧೀಶ್ ಎಸ್.ಪಿ. ದ್ವಿತೀಯ ಹಾಗೂ 1500 ಮೀಟರ್ ಓಟದಲ್ಲಿ ಭವಿಷ್ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಶಸ್ತಿ ವಿಜೇತ ಎಲ್ಲಾ ಕ್ರೀಡಾಪಟುಗಳು ಮುಂದಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಹರಿಣಾಕ್ಷಿ ಜಿ.ಕೆ. ಹಾಗೂ ಪ್ರಥ್ವಿರಾಜ್ ತರಬೇತಿ ನೀಡಿದ್ದರು.




