Breaking
22 Sep 2026, Tue

ಆರಂಬೋಡಿ ಬಸ್‌ಸ್ಟ್ಯಾಂಡ್ ಬಳಿ ವಿಳಾಸ ತಿಳಿಯದ ಯುವಕ ಪತ್ತೆ: ಪೋಷಕರ ಪತ್ತೆಗೆ ಮನವಿ

ಬೆಳ್ತಂಗಡಿ: ಸೆಪ್ಟೆಂಬರ್ 20ರ ರಾತ್ರಿ ಆರಂಬೋಡಿ ಬಸ್‌ಸ್ಟ್ಯಾಂಡ್ ಬಳಿ ವಿಳಾಸ ಹಾಗೂ ಪರಿಚಯದ ಬಗ್ಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗದ ಯುವಕನೊಬ್ಬ ಪತ್ತೆಯಾಗಿದ್ದಾನೆ.

ರಿಕ್ಷಾ ಚಾಲಕರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಯುವಕನನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದ್ದು, ಆತನಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಯುವಕ ತನ್ನ ವಿಳಾಸ ಅಥವಾ ಕುಟುಂಬದ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾನೆ.

ಯುವಕನ ವಯಸ್ಸು ಅಂದಾಜು 19 ವರ್ಷ ಇರಬಹುದು ಎಂದು ತಿಳಿದುಬಂದಿದ್ದು, ಸದ್ಯ ಅವರನ್ನು ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಯುವಕನನ್ನು ಯಾರಾದರೂ ಗುರುತಿಸಿದ್ದಲ್ಲಿ ಅಥವಾ ಆತನ ಕುಟುಂಬದ ಕುರಿತು ಮಾಹಿತಿ ಇದ್ದಲ್ಲಿ, ಸಂಬಂಧಪಟ್ಟವರ ಗಮನಕ್ಕೆ ತಂದು ಪೋಷಕರನ್ನು ಸಂಪರ್ಕಿಸುವಂತೆ ಹೊನ್ನಯ್ಯ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *