ಬೆಳ್ತಂಗಡಿ: ತಾಲೂಕು ತೋಟತ್ತಾಡಿ ಗ್ರಾಮದ ಪಾದೆ ಎಂಬಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸುವುದರ ಬಗ್ಗೆ ತೋಟತ್ತಾಡಿಯ ಶಿಶು ಮಂದಿರದಲ್ಲಿ ಜೂ.24 ಸಭೆ ನಡೆಯಿತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.ಮಂಗಳೂರು ಇದರ ನಿರ್ದೇಶಕರಾದ ಪ್ರಭಾಕರ್. ಎಚ್. ಆರಂಬೋಡಿಯವರು ಸಂಘ ಸ್ಥಾಪನೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಸಭೆಯಲ್ಲಿ ಪಾದೆ,ದೋರ್ತ ಡಿ, ಕೊಯಕ್ಕುರಿ, ಮತ್ತು ಸುತ್ತಮುತ್ತಲಿನ ಆಸಕ್ತ ಹೈನುಗಾರರು ಭಾಗಿಯಾದರು.
ಈ ಸಂದರ್ಭ ಉಪ ವ್ಯವಸ್ಥಾಪಕರಾದ ಡಾ.ಸತೀಶ್ ರಾವ್, ಹಿರಿಯರಾದ ಕಮಲಾಕ್ಷ, ತೋಟತ್ತಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಹಾಗೂ ಊರಿನ ಅನೇಕ ಗಣ್ಯರು, ರೈತರು, ಉಪಸ್ಥಿತರಿದ್ದರು.

