Breaking
20 Sep 2026, Sun

ಬೆಳ್ತಂಗಡಿ : ಅಪ್ರಾಪ್ತೆಯನ್ನು ಬೆದರಿಸಿ ಗರ್ಭವತಿಯಾಗಿಸಿದ ಪ್ರಕರಣ : ಆರೋಪಿಯ ಬಂಧನ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುದುವೆಟ್ಟು ಗ್ರಾಮದ ಮೇಲ್ದಡ್ಕ ನಿವಾಸಿ , ವೃತ್ತಿಯಲ್ಲಿ ಪೈಂಟಿಂಗ್ ಮತ್ತು ಚಾಲಕ ಕೆಲಸ ಮಾಡುತ್ತಿದ್ದ ದಿನೇಶ್ ಗೌಡ (30) ಎಂದು ಗುರುತಿಸಲಾಗಿದೆ.

ಆರೋಪಿಯು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವುದಲ್ಲದೆ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ‌ ಎನ್ನಲಾಗಿದೆ.

ಕೆಲವು ದಿನಗಳ ಬಳಿಕ ಬಾಲಕಿ ಹೊಟ್ಟೆ ನೋವು ಎಂದು ಮನೆಯವರಿಗೆ ತಿಳಿಸಿದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಪೋಷಕರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು , ಅದರಂತೆ ಆರೋಪಿಯನ್ನು ಅಟ್ರಾಸಿಟಿ ಮತ್ತು ಪೋಕ್ಸೋ ಪ್ರಕರಣದಡಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *