Breaking
20 Sep 2026, Sun

ಗುರುವಾಯನಕೆರೆ: ಅಕ್ರಮ ಗೋ ಸಾಗಾಟ ತಡೆದ ಹಿಂದೂ ಸಂಘಟನೆ ಕಾರ್ಯಕರ್ತರು: ಇನೋವಾ ಕಾರು ಜಖಂ

ಬೆಳ್ತಂಗಡಿ: ಇನೊವಾ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

2 ಹಸುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದು ವಿಚಾರ ತಿಳಿದು ಹಿಂದೂ ಸಂಘಟನಾ ಕಾರ್ಯಕರ್ತರು ವಾಹನ ತಡೆದಿದ್ದಾರೆ. ಈ ವೇಳೆ ಹಸುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹಸು ಸಾಗಿಸುತ್ತಿದ್ದ ಕಾರಿನ ಗ್ಲಾಸ್ ಪುಡಿ ಪುಡಿಯಾಗಿದ್ದು ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಪರಿಣಾಮ‌ ಟ್ರಾಫಿಕ್ ಜಾಮ್ ಉಂಟಾಗಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಗುರುವಾಯನಕೆರೆಯಿಂದ ಶಾಲೆ, ಕಾಲೇಜ್ ನಡೆದುಕೊಂಡು ಹೋಗಿದ್ದಾರೆ.‌

ಘಟನಾ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಟ್ರಾಫಿಕ್ ಜಾಮ್ ನಿಂದ ಶಾಲಾ ಕಾಲೇಜ್ ಮಕ್ಕಳು ಗುರುವಾಯನಕೆರೆಯಿಂದ ವಾಣಿ, ಚರ್ಚ್ ಡೋಡ್ ತನಕ ನಡೆದುಕೊಂಡು ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಸದ್ಯ ಟ್ರಾಫಿಕ್ ಪೊಲೀಸರು ಟ್ರಾಫಿಕ್ ತಿಳಿಗೊಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *