ಕುಂದಾಪುರ: ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಮಿನಿ ಟಿಪ್ಪರ್ ಕುಂಭಾಶಿಯ ಗಾಯತ್ರಿ ಕಂಫರ್ಟ್ಸ್ ಕಟ್ಟಡದ ಎದುರು ಕಾರಿಗೆ ಢಿಕ್ಕಿಯಾಗಿ ಚಾಂತಾರು ಗ್ರಾಮದ ನಾಗರಾಜ ಮತ್ತು ಅವರ ಪುತ್ರ ಸನ್ವಿತ್‌ಗೆ ಗಾಯವಾಗಿದೆ.
ಗಾಯಾಳುಗಳನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪರ್ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದು ಕಾರಿಗೆ ಢಿಕ್ಕಿಯಾಗಿದೆ. ಅಪಘಾತದ ಮಾಹಿತಿ ಬಂದ ಕೂಡಲೇ ಸಂಚಾರ ಠಾಣೆ ಎಸ್‌ಐ ಪ್ರಸಾದ್ ಕುಮಾರ್ ಸ್ಥಳಕ್ಕೆ ತೆರಳಿ ಮಿನಿ ಟಿಪ್ಪರನ್ನು ಪರಿಶೀಲಿಸಿದಾಗ ಕೆಂಪು ಸೈಜ್ ಕಲ್ಲುಗಳು ತುಂಬಿಸಿರುವುದು ಕಂಡು ಬಂತು. ಟಿಪ್ಪರ್ ವಾಹನದ ಮಾಲಕರನ್ನು ಸಂಪರ್ಕಿಸಿ ದಾಖಲೆ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲೆಗಳು ಇಲ್ಲವೆಂದು ತಿಳಿಸಿದರು. 200 ಕೆಂಪು ಸೈಜ್ ಕಲ್ಲು ಲೋಡ್ ಇದ್ದು ಮಿನಿ ಟಿಪ್ಪರ್ ಚಾಲಕ ಕಲ್ಲುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ.

