Breaking
12 May 2026, Tue

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಪರಾರಿ : ಕೆಲವೇ ಕ್ಷಣಗಳಲ್ಲಿ ಬಂಧನ

ಕೇರಳ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಗೋವಿಂದಚಾಮಿ ಯಾನೆ ಚಾರ್ಲಿ ಥಾಮಸ್ ನಸುಕಿನ ವೇಳೆ ಕಣ್ಣೂರು ಸೆಂಟ್ರಲ್‌ ಜೈಲಿನ ಗೋಡೆ ಹಾರಿ ಪರಾರಿಯಾದ ಘಟನೆ ನಡೆದಿದ್ದು, ಸ್ಥಳೀಯ ಜನರ ಸಹಕಾರದಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಬೆಳಗಿನ ಜಾವ 1.15 ರ ವೇಳೆ ತಪ್ಪಿಸಿಕೊಂಡಿದ್ದು 5.15 ರ ವೇಳೆ ಅಧಿಕಾರಿಗಳು ಪರೇಡ್ ಮೈದಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಗೋಡೆಯ ಕೆಳಗೆ ಬಟ್ಟೆಯಿಂದ ನೇತು ಹಾಕಿದ ಹಗ್ಗವನ್ನು ಗಮನಿಸಿ ಅಧಿಕಾರಿಗಳು ಸೆಲ್‌ ಗಳನ್ನು ಪರಿಶೀಲಿಸಿದಾಗ ಅಪರಾಧಿ ಗೋವಿಂದಚಾಮಿ ಪರಾರಿಯಾಗಿದ್ದು ಗೊತ್ತಾಯಿತು. ತಕ್ಷಣವೇ ರೈಲು ನಿಲ್ದಾಣಗಳು ಮತ್ತು ಬಸ್ ಡಿಪೋಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಹುಡುಕಾಟ ನಡೆಯಿತು.

ಬೆಳಗ್ಗೆ 9 ಗಂಟೆ ಸುಮಾರಿಗೆ ಕಣ್ಣೂರಿನಲ್ಲಿ ಆತನೂ ಕಾಣಿಸಿಕೊಂಡಿದ್ದರು, ಓಡಿ ತಪ್ಪಿಸಿಕೊಂಡಿದ್ದನು. ಬಳಿಕ ಸುಮಾರು 10.40 ಸ್ಥಳೀಯರ ಸಹಾಕಾರದೊಂದಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ , ಸ್ಥಳೀಯ ನಿವಾಸಿಯೊಬ್ಬರ ಬಾವಿಯೊಳಗೆ ಗೋವಿಂದಚಾಮಿ ಅಡಗಿಕೊಂಡಿರುವುದು ಪತ್ತೆಯಾಗಿದೆ. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *