ಎಕ್ಕಾರು: ನೀರುಡೆ 27ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ “ಬುಡಿಕಾಡ್ ಟೈಗರ್ಸ್ ಬುಡಿಕಾಡ್ ಎಕ್ಕಾರು” ತಂಡದಿಂದ ಆಯೋಜಿಸಲಾದ 3ನೇ ವರ್ಷದ ಚೌತಿದ ಪಿಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಜುಲೈ 12ರ ಆದಿತ್ಯವಾರ ನೀರುಡೆ ಗಣೇಶೋತ್ಸವ ರಜತ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ನೀರುಡೆಯ ಹರಿಪ್ರಕಾಶ್ ನೆಲ್ಲಿತೀರ್ಥ, ಗಣೇಶ್ ಶೆಟ್ಟಿ ಮುಚ್ಚೂರು, ಮುಕ್ತಾನಂದ ಶೆಟ್ಟಿ, ಅಶೋಕ್ ನಾಯಕ್ ಮುಚ್ಚೂರು, ಪೆಲಿಕ್ಸ್ ಡಿಸೋಜಾ, ರಯಾನ್ ರೋಶನ್ ಡಿಸೋಜಾ, ಶ್ಯಾಮ್ ಶೆಟ್ಟಿ ಎಕ್ಕಾರು ಮತ್ತು ತಂಡದ ಸಂಸ್ಥಾಪಕ ಶಶಿಧರ್ ಎಕ್ಕಾರು ಹಾಗೂ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಪಿಲಿವೇಷದ ಪೋಸ್ಟರ್ ಬಿಡುಗಡೆಯ ಮೂಲಕ ಈ ಬಾರಿಯ ಚೌತಿ ಉತ್ಸವಕ್ಕೆ ಚಾಲನೆ ನೀಡಲಾಯಿತು.




