Breaking
3 Sep 2026, Thu

ನೀರುಡೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನೀರುಡೆ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜುಲೈ 12 ಆದಿತ್ಯವಾರದಂದು ನೀರುಡೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ರಜತ ಮಂಟಪದಲ್ಲಿ ಜರುಗಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಹರಿಪ್ರಕಾಶ್ ನೆಲ್ಲಿ ತೀರ್ಥ ದೇವರಿಗೆ ಆರತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀ. ಬಿ. ವಿದ್ಯಾಧರ ಹೆಗ್ಡೆ, ಲ. ಮುಕ್ತಾ ನಂದ ಶೆಟ್ಟಿ , ಲ. ಗಣೇಶ್ ಡಿ ಶೆಟ್ಟಿ ,ಶಲೋಮ್ ಸಂಸ್ಥೆಯ ಮಾಲಕರಾದ ಫೆಲಿಕ್ಸ್ ಡಿಸೋಜ, ಶ್ಯಾಮ ಶೆಟ್ಟಿ ಎಕ್ಕಾರು, ರೋಷನ್ ಡಿಸೋಜ, ಅಶೋಕ್ ನಾಯ್ಕ್ ಮುಚ್ಚೂರು ಜ್ಯೋತಿ ಪ್ರಜ್ವಲಿಸುವ ಮುಖೇನ ಆಮಂತ್ರಣ ಪತ್ರಿಕೆ ಬಿಡುಗಡೆಗೆ ಚಾಲನೆ ನೀಡಿದರು.

ಶ್ರೀ ಬಿ ವಿದ್ಯಾಧರ ಹೆಗಡೆಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭವನ್ನು ಹಾರೈಸಿದರು.

ಲ. ಗಣೇಶ್ ಡಿ ಶೆಟ್ಟಿ ನೀರುಡೆ ಶಶಿಧರ ಬಳಗದ 3ನೇ ವರ್ಷದ ಹುಲಿ ವೇಷ ಕುಣಿತದ ನಾಮಫಲಕ ಅನಾವರಣ ಗೊಳಿಸಿ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಮಿಥುನ ಗುಜರನ್ ಬಳ್ಳಾಲಬೈಲು, ಕ್ರೀಡಾ ಕಾರ್ಯದರ್ಶಿ ಸಂತೋಷ್ ನೀರುಡೆ, ಕಾರ್ಯದರ್ಶಿ ದುರ್ಗಾ ಪ್ರಸಾದ್, ತಾರನಾಥ ಎಕ್ಕಾರು, ಪ್ರವೀಣ್ ನೀರುಡೆ, ಭಗವಾನ್ ನೀರುಡೆ, ಸೀತಾರಾಮ್ ರೈ, ಶಶಿಧರ್ ಬಳಗ, ಚಿದಾನಂದ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಹರಿಪ್ರಕಾಶ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *