Breaking
13 Jul 2026, Mon

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಂಟ್ವಾಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 8 ಅಂಗನವಾಡಿ ಕಾರ್ಯಕರ್ತೆ ಹಾಗೂ 12 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳು ತಾತ್ಕಾಲಿಕ ಹಾಗೂ ಗೌರವಧನ ಆಧಾರಿತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಕುಕ್ಕಿಪಾಡಿಯ ಮಾಡಾಮೆ, ಬಿ. ಮೂಡ ವಾರ್ಡ್ ನಂ.11ರ ಗೂಡಿನ ಬಳಿ, ಅಮ್ಮುಂಜೆಯ ಧಾರೆಕಟ್ಟೆ, ಪಾಂಡೀಲು, ಕರಿಯುಂಗಳದ ಗುಂಡಿಕುಮೇರು, ಸಜೀಪನಡುವಿನ ಸಜೀಪನಡುಪೇಟೆ ಹಾಗೂ ಸರಪಾಡಿಯ ಕುಂಟಾಲಪಲ್ಕೆ–ಕಾಮಾಜಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇವೆ.

ಅಂಗನವಾಡಿ ಸಹಾಯಕಿಯರ ಹುದ್ದೆಗಳು ಬಡಗಕಜೆಕಾರು ಹಾರ್ದೋಟ್ಟು, ಬಿ. ಕಸಬ ವಾರ್ಡ್ ನಂ.1ರ ಲೊರಟ್ಟೊಪದವು, ಬಾಳಿಲದ ಸಣ್ಣಕುಕ್ಕು, ಕಳ್ಳಿಗೆಯ ಪಾದೆ, ತೊಡಂಬಿಲ, ಬಿ. ಮೂಡ ವಾರ್ಡ್ ನಂ.15ರ ಶಾಂತಿಯಂಗಡಿ, ನರಿಂಗಾನದ ಚೆನ್ನಕಟ್ಟೆ, ಮೇರ ಮಜಲು ಬಡ್ಡೂರು, ಬಿ. ಕಸಬ ವಾರ್ಡ್ ನಂ.5ರ ಹೊಸ್ಮಾರು, ಮಣಿನಾಲ್ಕೂರಿನ ನಡುಮೊಗರು, ಬಿ. ಮೂಡ ವಾರ್ಡ್ ನಂ.13ರ ಕೈಕುಂಜೆ ಹಾಗೂ ಕುಕ್ಕಿಪಾಡಿ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರಗಳಲ್ಲಿ ಲಭ್ಯವಿವೆ.

ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬಂಟ್ವಾಳ, ಕೈಕುಂಜೆ ಜೋಡು ಮಾರ್ಗ ಅಂಚೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹತ್ತಿರ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08255-298562 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *