Breaking
26 Oct 2026, Mon

ಮ್ಯಾರಥಾನ್‌ನಲ್ಲಿ ಅವಳಿ ಪುತ್ರಿಯರ ಸಾಧನೆ; ತಂದೆಗೂ ದ್ವಿತೀಯ ಸ್ಥಾನ

ಸುಳ್ಯ: ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಹಕಾರ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ಸಹಕಾರಿ ಕ್ರೀಡಾಕೂಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಮೂವರು ಪ್ರಶಸ್ತಿ ಗಳಿಸಿ ಗಮನ ಸೆಳೆದಿದ್ದಾರೆ.

18 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜಾಲ್ಸೂರು ವಿನೋಭಾನಗರದ ವಿವೇಕಾನಂದ ವಿದ್ಯಾಸಂಸ್ಥೆಯ 9ನೇ ತರಗತಿಯ ಅವಳಿ ವಿದ್ಯಾರ್ಥಿನಿಯರಾದ ಕು. ಹೀಮನ್ಯ ಪ್ರಥಮ ಸ್ಥಾನ ಹಾಗೂ ಕು. ಹೀಮಶ್ರೀ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರ ತಂದೆ ತಾರಾನಾಥ ಅವರು ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಂದೇ ಕುಟುಂಬದ ಮೂವರು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *