Breaking
26 Oct 2026, Mon

ಬಂಟ್ವಾಳ: ಮಹಮ್ಮಾಯಿ ಗೇಮ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಾಜೇಶ್ ಏಲಬೆ ಆಯ್ಕೆ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ದಿಂಡಿಕೆರೆಯ ಮಹಮ್ಮಾಯಿ ಗೇಮ್ಸ್ ಕ್ಲಬ್ (ರಿ.) ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಏಲಬೆ ಆಯ್ಕೆಯಾಗಿದ್ದಾರೆ.

ಅ. 18ರಂದು ಸಂಘದ ಕಚೇರಿಯಲ್ಲಿ ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ಚೇತನ್ ಏಲಬೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನಿತಿನ್ ಏಲಬೆ, ಕಾರ್ಯದರ್ಶಿಯಾಗಿ ದೀಪಕ್ ದಿಂಡಿಕೆರೆ, ಜೊತೆ ಕಾರ್ಯದರ್ಶಿಯಾಗಿ ಅಖಿಲ್ ದಿಂಡಿಕೆರೆ, ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್ ಏಲಬೆ ಹಾಗೂ ಧನಂಷ್ ದಿಂಡಿಕೆರೆ ಆಯ್ಕೆಯಾಗಿದ್ದಾರೆ.

ಕ್ರೀಡಾ ಸಂಚಾಲಕರಾಗಿ ಸುಜಿತ್ ದಿಂಡಿಕೆರೆ ಹಾಗೂ ಸಹ ಸಂಚಾಲಕರಾಗಿ ಜೈದೀಪ್ ಏಲಬೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *