Breaking
22 Oct 2026, Thu

ಮಂಗಳೂರು ದಸರಾ ಮ್ಯಾರಥಾನ್‌ನಲ್ಲಿ ಜಾಲ್ಸೂರಿನ ಅವಳಿ ಸಹೋದರಿಯರ ಸಾಧನೆ

ಸುಳ್ಯ: ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಯೋಜಿಸಲಾದ ಮ್ಯಾರಥಾನ್‌ನಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ಅವಳಿ ಸಹೋದರಿಯರು ಹಾಗೂ ಅವರ ತಂದೆ ಉತ್ತಮ ಸಾಧನೆ ಮಾಡಿದ್ದಾರೆ.

3 ಕಿ.ಮೀ. ಮ್ಯಾರಥಾನ್‌ನ ಬಾಲಕಿಯರ ವಿಭಾಗದಲ್ಲಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಕು. ಹೀಮನ್ಯ ದ್ವಿತೀಯ ಸ್ಥಾನ ಪಡೆದರೆ, ಅವರ ಅವಳಿ ಸಹೋದರಿ ಕು. ಹೀಮಶ್ರೀ ಚತುರ್ಥ ಸ್ಥಾನ ಗಳಿಸಿದ್ದಾರೆ.

ಇವರ ತಂದೆ ತಾರಾನಾಥ ಅವರು ಪುರುಷರ ವಿಭಾಗದ 10 ಕಿ.ಮೀ. ಮ್ಯಾರಥಾನ್‌ನಲ್ಲಿ ಆರನೇ ಸ್ಥಾನ ಪಡೆದು ಪದಕ ಹಾಗೂ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಂದೇ ಕುಟುಂಬದ ಮೂವರು ಮ್ಯಾರಥಾನ್‌ನಲ್ಲಿ ಸಾಧನೆ ಮಾಡಿರುವುದು ಗಮನ ಸೆಳೆದಿದೆ.

Leave a Reply

Your email address will not be published. Required fields are marked *