Breaking
20 Oct 2026, Tue

ವಾಮದಪದವು: ಸ್ವಸ್ತಿಕ್ ಸೌಂಡ್ಸ್ & ಲೈಟ್ಸ್‌ ನಿಂದ ಪ್ರೋ ಟ್ರಸ್ ರೆಂಟಲ್ ಸೇವೆಗೆ ಚಾಲನೆ

ಬಂಟ್ವಾಳ: ವಾಮದಪದವು ಪರಿಸರದಲ್ಲಿ ಕಳೆದ 15 ವರ್ಷಗಳಿಂದ ಸೌಂಡ್ಸ್ ಮತ್ತು ಲೈಟಿಂಗ್ಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಸ್ತಿಕ್ ಸೌಂಡ್ಸ್ & ಲೈಟ್ಸ್ ಸಂಸ್ಥೆಯ ಮುಂದಿನ ಹೆಜ್ಜೆಯಾಗಿ ಆರಂಭಿಸಲಾದ ಪ್ರೋ ಟ್ರಸ್ ರೆಂಟಲ್ ಸೇವೆಯ ಲೋಗೋ ಬಿಡುಗಡೆ ಕಾರ್ಯಕ್ರಮ ಸೋಮವಾರ ಕರಿಮಲೆ ವಾಮದಪದವಿನ ರಮೇಶ್ ಪೈ ಸಭಾಭವನದಲ್ಲಿ ನಡೆಯಿತು.

ಸ್ವಸ್ತಿಕ್ ಸೌಂಡ್ಸ್ & ಲೈಟ್ಸ್ ಸಂಸ್ಥೆಯ ಮಾಲಕರಾದ ಸತೀಶ್ ಅವರು ತಮ್ಮ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಈ ನೂತನ ಯೋಜನೆಯನ್ನು ರೂಪಿಸಿದ್ದಾರೆ. ಕಳೆದ 15 ವರ್ಷಗಳಿಂದ ಸೌಂಡ್ಸ್ ಮತ್ತು ಲೈಟಿಂಗ್ಸ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಸಂಸ್ಥೆಯು ಇದೀಗ ಪ್ರೋ ಟ್ರಸ್ ರೆಂಟಲ್ ಸೇವೆಯ ಮೂಲಕ ಹೊಸ ಹೆಜ್ಜೆಯನ್ನಿಟ್ಟಿದೆ.

ಕಾರ್ಯಕ್ರಮದಲ್ಲಿ ವಾಮದಪದವಿನ ಮಹಾಲಕ್ಷ್ಮಿ ಟ್ರೇಡರ್ಸ್ ಮಾಲಕರಾದ ಅನಂತ ಪೈ, ಸಿದ್ಧಕಟ್ಟೆಯ ಪಿಂಕಿ ಅರೇಂಜರ್ಸ್ ಮಾಲಕರಾದ ಮೈಕಲ್ ಡಿ ಕೋಸ್ತಾ, ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುರಿಯಾಳ, ಭ್ರಾಮರಿ ಈವೆಂಟ್ಸ್ ಮಾಲಕರಾದ ವಸಂತ ಬಂಟ್ವಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಮಾಧವ ಕುಲ್ಲಾಲ್, ಪ್ರಗತಿಪರ ಕೃಷಿಕರಾದ ಜಯರಾಮ್ ಶೆಟ್ಟಿ ಕಲಾಕುಂಜ, ಸೂಕ್ತ ನ್ಯೂಸ್ ಮಾಲಕರಾದ ಪ್ರದೀಪ್ ಪೂಜಾರಿ ಕುಕ್ಕಿಪಾಡಿ, ರೇಖಾ ಸತೀಶ್ ಅಂತರಗುತ್ತು, ಸ್ವಸ್ತಿಕ್, ಶರಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಉಮೇಶ್ ಕೋಟ್ಯಾನ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *