Breaking
20 Oct 2026, Tue

ಸಜೀಪದಲ್ಲಿ ಶತಸಂಭ್ರಮದ ಅಂಗವಾಗಿ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ

ಸಜೀಪಮೂಡ: ಸಜೀಪ ದಸರಾ ಶತಸಂಭ್ರಮ 2026ರ ಅಂಗವಾಗಿ ಶ್ರೀ ಶಾರದಾ ಪೂಜಾ ಶತಮಾನೋತ್ಸವ ಸಮಿತಿ, ಸುಭಾಷ್ ಯಕ್ಷಗಾನ ಮಂಡಲ, ಸುಭಾಷ್ ನಗರ, ಸಜೀಪಮೂಡ ಇದರ ವತಿಯಿಂದ ವಿಶ್ವಭಾರತಿ ಯಕ್ಷ ಸಂಜೀವಿನಿ (ರಿ.) ಮಡಿಪು ಇವರ ಸಹಯೋಗದಲ್ಲಿ ‘ಶಿವಭಕ್ತ ವೀರಮಣಿ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಪ್ರಶಾಂತ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಗಾಳಿಮನೆ ವಿನಾಯಕ ಭಟ್, ಗುಂಡ್ಯ, ಡಾ. ಈಶ್ವರ ಭಟ್, ರಾಮದಾಸ್ ವಗೆನಾಡ್, ಕೀರ್ತನ ಹೊಳ್ಳ ಹಾಗೂ ರಾಮಮೂರ್ತಿ ಕುದುರೆ ಕೂಡ್ಲು ಭಾಗವಹಿಸಿದರು.

Leave a Reply

Your email address will not be published. Required fields are marked *