Breaking
20 Oct 2026, Tue

ಸಿದ್ಧಕಟ್ಟೆಯಲ್ಲಿ 7th ಹೆವೆನ್ ಕೇಕ್ ಶಾಪ್ ಶುಭಾರಂಭ

ಬಂಟ್ವಾಳ: ಸಿದ್ಧಕಟ್ಟೆ ಮುಖ್ಯರಸ್ತೆಯ ಫಲ್ಗುಣಿ ಕಾಂಪ್ಲೆಕ್ಸ್‌ನಲ್ಲಿ 7th ಹೆವೆನ್ ಕೇಕ್ ಶಾಪ್‌ನ ಸಿದ್ಧಕಟ್ಟೆ ಫ್ರ್ಯಾಂಚೈಸ್ ಸೋಮವಾರ ಶುಭಾರಂಭಗೊಂಡಿತು.

ಪೂಂಜಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಫಲ್ಗುಣಿ ಕಾಂಪ್ಲೆಕ್ಸ್‌ನ ಮಾಲಕರಾದ ದುರ್ಗಾದಾಸ್ ಶೆಟ್ಟಿ ಹಾಗೂ ರಂಗಭೂಮಿ ಮತ್ತು ತುಳು ಚಿತ್ರರಂಗದ ನಟರಾದ ಸಂದೀಪ್ ಶೆಟ್ಟಿ ರಾಯಿ ಮತ್ತು ಮನೀಶ್ ಶೆಟ್ಟಿ ಉಪ್ಪಿರ ಅವರು ಸಂಸ್ಥೆಗೆ ಶುಭ ಹಾರೈಸಿದರು.

ಮಂಗಳೂರು 7th ಹೆವೆನ್ ಗ್ರೂಪ್‌ನ ಶಮಿತ್ ಶೆಟ್ಟಿ, ಚೇತನ್ ಶೆಟ್ಟಿ, ದೀಪಕ್ ಶೆಟ್ಟಿ, ಸಿದ್ಧಕಟ್ಟೆ ಫ್ರ್ಯಾಂಚೈಸ್ ಮಾಲಕರಾದ ಲಿಖಿತ್ ಅರಸ, ಅಕ್ಷಯ್ ಕುಮಾರ್, ಸಿಬ್ಬಂದಿ ವರ್ಗ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಕೇಕ್ ಎಂದರೆ ಕೇವಲ ಸಿಹಿ ತಿಂಡಿಯಲ್ಲ, ಅದು ಪ್ರತಿಯೊಂದು ಸಂಭ್ರಮದ ಅವಿಭಾಜ್ಯ ಅಂಗ. ಹುಟ್ಟುಹಬ್ಬದಿಂದ ಮದುವೆ ವಾರ್ಷಿಕೋತ್ಸವದವರೆಗೆ, ಪ್ರತಿಯೊಂದು ವಿಶೇಷ ಕ್ಷಣಕ್ಕೂ ಕೇಕ್ ತನ್ನದೇ ಆದ ಮೆರುಗನ್ನು ನೀಡುತ್ತದೆ. ಇಂತಹ ಸಿಹಿಯ ಅನುಭವವನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ 7th Heaven Cakes ತನ್ನ ಸಿದ್ಧಕಟ್ಟೆ ಫ್ರ್ಯಾಂಚೈಸ್ ಮೂಲಕ ಗ್ರಾಹಕರನ್ನು ತಲುಪಿದೆ.

ಆಕರ್ಷಕ ವಿನ್ಯಾಸಗಳು, ವೈವಿಧ್ಯಮಯ ರುಚಿಗಳು ಹಾಗೂ ಗ್ರಾಹಕರ ಆಯ್ಕೆಗೆ ತಕ್ಕ ಕೇಕ್‌ಗಳ ಮೂಲಕ ಸಂಭ್ರಮದ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಳ್ಳಲು ಇದು ಒಂದು ಹೊಸ ಅವಕಾಶವಾಗಿದೆ.

Leave a Reply

Your email address will not be published. Required fields are marked *