Breaking
21 Oct 2026, Wed

ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ: ನಗರದಲ್ಲಿ ವಾಹನ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ

ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ 21ರ ಬುಧವಾರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಬೆಳಗ್ಗೆ 6 ಗಂಟೆಯವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಹಾಗೂ ಸ್ತಬ್ಧಚಿತ್ರಗಳ ಸಂಚಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ವಾಹನ ಸಂಚಾರದಲ್ಲಿ ಬದಲಾವಣೆಗಳನ್ನು ಜಾರಿಗೊಳಿಸಿದೆ.


ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಈ ಮಾರ್ಗಗಳನ್ನು ಸಾಧ್ಯವಾದಷ್ಟು ತಪ್ಪಿಸಿ ಪರ್ಯಾಯ ರಸ್ತೆಗಳನ್ನು ಬಳಸಬೇಕು. ಅಲ್ಲದೆ, ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


ಮೆರವಣಿಗೆ ಸಾಗುವ ಪ್ರಮುಖ ಮಾರ್ಗ
ಕುದ್ರೋಳಿ ದೇವಸ್ಥಾನದ ದ್ವಾರದಿಂದ ಆರಂಭವಾಗುವ ಮೆರವಣಿಗೆಯು ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ (ಲೇಡಿಹಿಲ್), ಲಾಲ್ಬಾಗ್, ಬಳ್ಳಾಲ್ಬಾಗ್, ಪಿ.ವಿ.ಎಸ್. ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕೆಬಿಕಟ್ಟೆ, ಕಾರ್ ಸ್ಟ್ರೀಟ್ ಹಾಗೂ ನ್ಯೂ ಚಿತ್ರಾ ಜಂಕ್ಷನ್ ಮೂಲಕ ಸಾಗಿ ಪುನಃ ಕುದ್ರೋಳಿ ದೇವಸ್ಥಾನದ ದ್ವಾರವನ್ನು ತಲುಪಲಿದೆ.


ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
• ಕೊಟ್ಟಾರ ಚೌಕಿ ಜಂಕ್ಷನ್ನಿಂದ ನಗರಕ್ಕೆ: ಲೇಡಿಹಿಲ್ ಮಾರ್ಗವಾಗಿ ಮಂಗಳೂರು ನಗರಕ್ಕೆ ಬರುವ ವಾಹನಗಳು ಕುಂಟಿಕಾನ, ಕೆಪಿಟಿ ಹಾಗೂ ನಂತೂರು ಮಾರ್ಗವಾಗಿ ಸಂಚರಿಸಬೇಕು.
• ಬಂಟ್ಸ್ ಹಾಸ್ಟೆಲ್ನಿಂದ ಪಿ.ವಿ.ಎಸ್. ಕಡೆಗೆ: ಎಂ.ಜಿ. ರಸ್ತೆಯಲ್ಲಿ ಸಾಗುವ ವಾಹನಗಳು ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಬಟ್ಟಗುಡ್ಡ–ಕೆಪಿಟಿ ಅಥವಾ ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಮಲ್ಲಿಕಟ್ಟೆ ಮಾರ್ಗ ಬಳಸಬೇಕು.
• ಕೆಎಸ್ಆರ್ಟಿಸಿ ಜಂಕ್ಷನ್ನಿಂದ ಲಾಲ್ಬಾಗ್ ಕಡೆಗೆ: ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗದಲ್ಲಿ ಸಂಚರಿಸಬೇಕು.
• ಕೆಎಸ್ಆರ್ಟಿಸಿ ಬಸ್ಗಳಿಗೆ: ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳು ಕೆಎಸ್ಆರ್ಟಿಸಿ ಜಂಕ್ಷನ್ನಿಂದ ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗವಾಗಿ ತೆರಳಬೇಕು.
• ಹಂಪನಕಟ್ಟೆಯಿಂದ ಪಿ.ವಿ.ಎಸ್. ಕಡೆಗೆ: ಕೆ.ಎಸ್.ಆರ್. ರಸ್ತೆ ಹಾಗೂ ನವಭಾರತ ವೃತ್ತದ ಮೂಲಕ ಸಾಗುವ ವಾಹನಗಳು ಹಂಪನಕಟ್ಟೆ–ಎಲ್.ಎಚ್.ಎಚ್.–ಅಂಬೇಡ್ಕರ್ ಜಂಕ್ಷನ್ ಮಾರ್ಗ ಬಳಸಬೇಕು.
• ನ್ಯೂ ಚಿತ್ರಾ ಜಂಕ್ಷನ್ನಿಂದ ನವಭಾರತ ವೃತ್ತದ ಕಡೆಗೆ: ಎಲ್ಲ ಮಾದರಿಯ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು.
• ಲೇಡಿಹಿಲ್ನಿಂದ ಮಣ್ಣಗುಡ್ಡೆ ಹಾಗೂ ಕುದ್ರೋಳಿ ಕಡೆಗೆ: ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್, ದುರ್ಗಾಮಹಲ್ ಹಾಗೂ ಕುದ್ರೋಳಿ ದೇವಸ್ಥಾನದ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗ ಬಳಸಬೇಕು.
ವಾಹನ ನಿಲುಗಡೆಗೆ ಅವಕಾಶವಿರುವ ಸ್ಥಳಗಳು
ದಸರಾ ಮೆರವಣಿಗೆ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಕೆಳಗಿನ ಸ್ಥಳಗಳಲ್ಲಿ ನಿಲುಗಡೆ ಮಾಡಬಹುದು:
• ಕರಾವಳಿ ಮೈದಾನ
• ಅಳಕೆ ಮಾರ್ಕೆಟ್
• ಉರ್ವ ಮಾರ್ಕೆಟ್ ಮೈದಾನ
• ಉರ್ವ ಕೆನರಾ ಸ್ಕೂಲ್
• ಕೆನರಾ ಡೊಂಗರಕೇರಿ ಸ್ಕೂಲ್
• ಪೊಂಪೈ ಚರ್ಚ್
• ದುರ್ಗಾಮಹಲ್ ಹೋಟೆಲ್
• ಕುದ್ರೋಳಿ ನಾರಾಯಣ ಕಾಲೇಜು
• ಬಿ.ಇ.ಎಂ. ಶಾಲಾ ಆವರಣ
• ಕಾರ್ ಸ್ಟ್ರೀಟ್ನ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ
• ಹೋಟೆಲ್ ವಿಮಲೇಶ್ ಪಾರ್ಕಿಂಗ್ ಸ್ಥಳ
ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ..

Leave a Reply

Your email address will not be published. Required fields are marked *