ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಹಕಾರದೊಂದಿಗೆ ಉಚಿತವಾಗಿ ಗುರುತುಚೀಟಿ (ಐಡಿ ಕಾರ್ಡ್) ಹಾಗೂ ಶಾಲಾ ಬೆಲ್ಟ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲಿಯಾನ್ ಸಂಚಯಗಿರಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಸೋಮನಾಥ ಸಾಲಿಯಾನ್, ಸಂಘದ ಸದಸ್ಯರು ಹಾಗೂ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಿಸಿ ಶುಭ ಹಾರೈಸಿದರು.

ಶಾಲೆಯ ಹಿರಿಯ ಶಿಕ್ಷಕಿ ಹಾಗೂ ಕುಲಾಲ ಸುಧಾರಕ ಸಂಘದ ಸದಸ್ಯೆಯಾದ ಸುಶೀಲಾ ಲಿಂಗಪ್ಪ ಮಾತನಾಡಿ, ಈ ಯೋಜನೆ ಯಶಸ್ವಿಯಾಗಲು ಸಂಘದ ಸದಸ್ಯರಾದ ಜಲಜಾಕ್ಷಿ, ಚೆನ್ನಪ್ಪ, ನಮಿತಾ, ಉಮೇಶ್, ಮಾಲತಿ ಮಚ್ಚೇಂದ್ರ, ಜಯಂತಿ ಟೀಚರ್, ನಾರಾಯಣ ಸಿ. ಪೆರ್ನೆ, ಯಾದವ ಕುಲಾಲ್ ಅಗ್ರಬೈಲ್, ಸತೀಶ್ ಕುಲಾಲ್ ಹಾಗೂ ಸುಶೀಲಾ ಟೀಚರ್ ಅವರು ಮಕ್ಕಳಿಗೆ ಅಗತ್ಯ ನೆರವು ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿನೋದಾ, ಸದಸ್ಯರಾದ ರಮ್ಯಾ ಮತ್ತು ಶಿವಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


