Breaking
23 Oct 2026, Fri

ಮುಳೂರು: ಚಾಲಕನಿಗೆ ದಿಢೀರ್ ಅನಾರೋಗ್ಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ!

ಮುಳೂರು: ಸಂಚರಿಸುತ್ತಿದ್ದ ಬಸ್ನ ಚಾಲಕ ದಿಢೀರ್ ಅಸ್ವಸ್ಥಗೊಂಡರೂ ಸಮಯಪ್ರಜ್ಞೆ ಮೆರೆದು ಬಸ್ಸನ್ನು ರಸ್ತೆಬದಿಗೆ ಚಲಾಯಿಸಿದ ಪರಿಣಾಮ ಸಂಭವಿಸಬಹುದಾಗಿದ್ದ ಭಾರಿ ಅಪಘಾತವೊಂದು ತಪ್ಪಿದ ಘಟನೆ ಗುರುವಾರ ಮುಳೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ‘ವಿಜಯಲಕ್ಷ್ಮಿ ಎಕ್ಸ್ಪ್ರೆಸ್’ ಬಸ್ ಮುಳೂರು ತಲುಪುತ್ತಿದ್ದಂತೆ ಚಾಲಕನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಎಡಭಾಗಕ್ಕೆ ಚಲಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ, ಅಸ್ವಸ್ಥತೆಯ ನಡುವೆಯೂ ತಕ್ಷಣ ಬಸ್ಸನ್ನು ರಸ್ತೆಬದಿಗೆ ತಿರುಗಿಸಿದ್ದಾರೆ.


ಈ ವೇಳೆ ಬಸ್ ಮೊದಲು ರಸ್ತೆಬದಿಯಲ್ಲಿದ್ದ ಸಣ್ಣ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಮುಂದೆ ಸಾಗಿ ದೊಡ್ಡ ಮರಕ್ಕೆ ಅಪ್ಪಳಿಸಿ ನಿಂತಿದೆ. ಬಸ್ ಸಮೀಪದಲ್ಲಿದ್ದ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆಯದೆ ನಿಂತಿದ್ದರಿಂದ ಸಂಭವನೀಯ ದೊಡ್ಡ ಅಪಾಯ ತಪ್ಪಿದಂತಾಗಿದೆ.


ಘಟನೆಯಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿತ್ತು.
ಚಾಲಕನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡರೂ ತಕ್ಷಣದ ನಿರ್ಧಾರದಿಂದ ಬಸ್ಸನ್ನು ರಸ್ತೆಬದಿಗೆ ಚಲಾಯಿಸಿದ ಪರಿಣಾಮ ಭಾರಿ ದುರಂತವೊಂದು ತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *