ಮೈಸೂರು: ಮೈಸೂರಿನ ಪ್ರಸಿದ್ಧ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥರಾದ ಪರಮಪೂಜ್ಯ ಶ್ರೀ ಬಾಷಮ್ ಸ್ವಾಮೀಜಿಯವರು ಆರ್‌ಟಿಐ ಮಾಹಿತಿ ಪತ್ರಿಕೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಆಶೀರ್ವಾದ ನೀಡಿ ಶುಭ ಹಾರೈಸಿದರು.

ಪತ್ರಿಕೆಯು ಜನಸಾಮಾನ್ಯರಿಗೆ ಸತ್ಯ, ನ್ಯಾಯ ಹಾಗೂ ಸಾರ್ವಜನಿಕ ಮಾಹಿತಿಯನ್ನು ತಲುಪಿಸುವ ಕಾರ್ಯದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ ಸ್ವಾಮೀಜಿಯವರು, ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಜನರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಪಾರದರ್ಶಕ ಆಡಳಿತಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಪತ್ರಿಕೆಯ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಸ್ವಾಮೀಜಿಯವರ ಆಶೀರ್ವಾದ ಹಾಗೂ ಶುಭ ಹಾರೈಕೆಗಳು ಆರ್‌ಟಿಐ ಮಾಹಿತಿ ಪತ್ರಿಕೆಯ ಬಳಗಕ್ಕೆ ಮತ್ತಷ್ಟು ಉತ್ಸಾಹ ಮತ್ತು ಪ್ರೇರಣೆ ನೀಡಿವೆ ಎಂದು ಪತ್ರಿಕೆಯ ಪ್ರಕಟಣೆ ತಿಳಿಸಿದೆ.
ಆರ್‌ಟಿಐ ಮಾಹಿತಿ ಪತ್ರಿಕೆಯ ಬಳಗವು ಶ್ರೀ ಬಾಷಮ್ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದೆ.




