Breaking
2 Sep 2026, Wed

ಮಣಿಪಾಲದಲ್ಲಿ ಸ್ಕೂಲ್ ಬಸ್ ಪಲ್ಟಿ: 7 ಮಕ್ಕಳಿಗೆ ಗಾಯ, ವಿದ್ಯಾರ್ಥಿನಿಯೊಬ್ಬಳ ಸ್ಥಿತಿ ಗಂಭೀರ

ಮಣಿಪಾಲ: ಖಾಸಗಿ ಶಾಲೆಯ ಬಸ್ಸೊಂದು ಪಲ್ಟಿಯಾದ ಪರಿಣಾಮ ಏಳು ಮಕ್ಕಳು ಗಾಯಗೊಂಡಿರುವ ಘಟನೆ ಕೊಡಂಗೆ ದೇವಸ್ಥಾನ ಬಳಿ ಜುಲೈ 10ರ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಅವಘಡದಲ್ಲಿ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಸ್ ಪಲ್ಟಿಯಾಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಯಾಳುಗಳ ಹೆಚ್ಚಿನ ವಿವರಕ್ಕಾಗಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *