ಬಂಟ್ವಾಳ : ಸಿದ್ದಕಟ್ಟೆಯಲ್ಲಿ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಇಂದು ರಾತ್ರಿ ನಡೆದಿದ್ದು ಚಿಕಿತ್ಸೆಗಾಗಿ ಮೂಡಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇರಿತಕೊಳಗಾದವರು ಸಿದ್ದಕಟ್ಟೆ ಸಮೀಪದ ಮಂಚಕಲ್ಲು ಮೇಲುಗುಡ್ಡೆಯ ನಿವಾಸಿಯಾಗಿರುವ ಪ್ರಕಾಶ್ ಪೂಜಾರಿ ಎಂದು ಗುರುತಿಸಲಾಗಿದ್ದು ಕ್ಷುಲಕ ಕಾರಣಕ್ಕೆ ಈ ಇರಿತವಾಗಿರಬಹುದೆಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಕೃತ್ಯದ ನಿಖರವಾದ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ.

