ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 5 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ರೂಫ್ಟಾಪ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಗಿದೆ.
ಬ್ಯಾಂಕಿನ ಸಿಎಸ್ಆರ್ ಯೋಜನೆಯಡಿ ಹಮ್ಮಿಕೊಂಡಿರುವ ‘ಗ್ರೀನ್ ಎನರ್ಜಿ ಇನಿಶಿಯೇಟಿವ್’ ಮೂಲಕ ಈ ಕೊಡುಗೆ ನೀಡಲಾಗಿದ್ದು, ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.

ಯೂನಿಯನ್ ಬ್ಯಾಂಕ್ನ ಮಂಗಳೂರು ವಲಯದ ಮುಖ್ಯಸ್ಥ ಸತ್ಯಂ ಪಲುಗುಲ ಅವರು ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ವಿರೂಪಾಕ್ಷಪ್ಪ ಚಿಕ್ಕನರಗುಂದ, ಬ್ರಾಂಚ್ ಮ್ಯಾನೇಜರ್ ಅಜಯ್ ಸಹಾರನ್, ಅಸಿಸ್ಟೆಂಟ್ ಮ್ಯಾನೇಜರ್ ಅಶ್ವಿನಿ, ಸಿಬ್ಬಂದಿ ಜಯರಾಮ್ ಉಪಸ್ಥಿತರಿದ್ದರು.

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ಕಾರ್ಯನಿರ್ವಹಣಾಧಿಕಾರಿ ದಿವಾಕರ್ ಮುಗುಳ್ಯ ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗವೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೌರಶಕ್ತಿಯ ಬಳಕೆಯಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.




