Breaking
12 Oct 2026, Mon

ಕೊಯಿಲ: ಬಬ್ಬರ್ಯ ದೈವಸ್ಥಾನ ಪುನರ್ ನಿರ್ಮಾಣ ವಿಜ್ಞಾಪನಾಪತ್ರ ಬಿಡುಗಡೆ

ಬಂಟ್ವಾಳ: ಇಲ್ಲಿನ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳ ಬಡಿಭಾಗದ ಬಬ್ಬರ್ಯಬೈಲು ಎಂಬಲ್ಲಿ ರೂ 1.50 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಬಬ್ಬರ್ಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಿಜ್ಞಾಪನಾ ಪತ್ರ ಭಾನುವಾರ ಬಿಡುಗಡೆಗೊಂಡಿತು.


ಮಾವಂತೂರು ಬಲವಂಡಿ ಕ್ಷೇತ್ರದ ಗಡಿಪ್ರಧಾನ ದುರ್ಗದಾಸ್ ಶೆಟ್ಟಿ ಮಾವಂತೂರು ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿದರು. ‘ಕಡಲತೀರದಲ್ಲಿ ಮೊಗವೀರರು ಆರಾಧಿಸುವ ಬಬ್ಬರ್ಯ ದೈವ ಮತ್ತು ಇಲ್ಲಿನ ಬಬ್ಬರ್ಯಬೈಲು ಮಣ್ಣಿನಲ್ಲಿ ಈ ಹಿಂದೆ ಆರಾಧಿಸುತ್ತಿದ್ದ ಪೂರ್ವಜರ ಭಕ್ತಿಗೂ ಅವಿನಭಾವ ನಂಟು ಹೊಂದಿದೆ’ ಎಂದು ಅವರು ಹೇಳಿದರು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಮುಖ್ಯ ಸಂಚಾಲಕ ವಸಂತ ಕುಮಾರ್ ಅನ್ನಳಿಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ‘ಸ್ಥಳೀಯ ನೂರಾರು ಮಂದಿ ಭಕ್ತರ ಶ್ರಮದಾನ ಮತ್ತು ದಾನಿಗಳ ನೆರವಿನಿಂದ ಭವ್ಯ ದೈವಸ್ಥಾನ ಎದ್ದು ನಿಲ್ಲಲಿದೆ’ ಎಂದರು.


ಆಡಳಿತ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಬ್ಯಾರಿಕೊಡಿ, ಸಮಿತಿ ಗೌರವಾಧ್ಯಕ್ಷ ಯಶೋಧರ ರೈ ದೇರಾಜೆಗುತ್ತು, ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ, ರಾಜೇಶ್ ಗೋವಿಂದಬೆಟ್ಟು, ಅಮೃತ ಮಹಿಳಾ ಸಮಿತಿ ಅಧ್ಯಕ್ಷೆ ಶಾಲಿನಿ ಪಿಲ್ಕಾಜೆ, ಪ್ರಮುಖರಾದ ಉಮೇಶ ಸಪಲ್ಯ, ಗಂಗಾಧರ ಪಿಲ್ಕಾಜೆ, ಆನಂದ ಪೂಜಾರಿ ಅಂತರ, ಕೇಶವ ಶೆಟ್ಟಿ ಪಿಲ್ಕಾಜೆ, ಆನಂದ ಬುರಾಲು, ಜಿ.ದಾಮೋದರ ಬಂಗೇರ, ಅಚ್ಚುತ ಆಚಾರ್ಯ, ಸಂದೇಶ ಅಂತರ, ಜನಾರ್ಧನ ಪೂಜಾರಿ ಪಿಲ್ಕಾಜೆ, ರಾಜೇಶ ಪಿಲ್ಕಾಜೆ, ಸುಂದರ ಸಪಲ್ಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *