ಹನ್ನೆರಡು ಕವಲು: ಮೂಡುಬಿದಿರೆ ತಾಲೂಕಿನ ಹನ್ನೆರಡು ಕವಲು ಸಮೀಪದ ನದಿಯಲ್ಲಿ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ (55) ಅವರ ಮೃತದೇಹ ಜುಲೈ 13ರ ಸೋಮವಾರ ಪತ್ತೆಯಾಗಿದೆ.

ಲೂನಾ ವಾಹನದಲ್ಲಿ ಭೋಜ ಪೂಜಾರಿ ಅವರು ಮನೆಯಿಂದ ತೆರಳಿದ ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸುತ್ತಿದ್ದ ವೇಳೆ ಹನ್ನೆರಡು ಕವಲು ಬಳಿಯ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ. ಅವಿವಾಹಿತರಾಗಿದ್ದ ಭೋಜ ಪೂಜಾರಿ ಅವರ ಸಾವಿನ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




