ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ 4 ದಿನಗಳ ಬಳಿಕ ಪತ್ತೆ

ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಕುಮಾರಧಾರ ನದಿಯಲ್ಲಿ ಇಂದು (ಜು.25) ಪತ್ತೆಯಾಗಿದೆ.

ಮೃತರನ್ನು ಸುಬ್ರಹ್ಮಣ್ಯ ದೇವರಗದ್ದೆ ನಿವಾಸಿ ಹೊನ್ನಪ್ಪ (52) ಎಂದು ಗುರುತಿಸಲಾಗಿದೆ.

ಹೊನ್ನಪ್ಪ ಅವರು ಜು.22 ರಿಂದ ನಾಪತ್ತೆಯಾಗಿದ್ದರು. ಅವರು ಕುಮಾರಧಾರ ನದಿ ಕಡೆಗೆ ಓಡುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನಲೆ ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕುಮಾರಧಾರ ನದಿಯಲ್ಲಿ ಅಂದು ರಾತ್ರಿಯಿಂದಲೇ ಹುಡುಕಾಟ ಆರಂಭಿಸಲಾಗಿತ್ತು.

ಜು.23 ರಿಂದ ಎಸ್.ಡಿ.ಆರ್.ಎಫ್. ತಂಡ, ಈಶ್ವರ್ ಮಲ್ಪೆ ತಂಡ, ಆಂಬ್ಯುಲೆನ್ಸ್ ಚಾಲಕರ ತಂಡ, ರವಿ ಕಕ್ಕೆಪದವು ತಂಡ, ಅಗ್ನಿಶಾಮಕದಳ ಸುಳ್ಯ, ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದ್ದು, ಕುಮಾರಧಾರ ಸ್ನಾನಘಟ್ಟದಿಂದ ಸುಮಾರು ಕಿ.ಮೀ. ಕೆಳಭಾಗದಲ್ಲಿ ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *