Breaking
12 May 2026, Tue

ಮಗನನ್ನು ಕಳೆದುಕೊಂಡ ತಾಯಿ: ನದಿಗೆ ಹಾರಿ ಆತ್ಮಹತ್ಯೆ

ಚಿಕ್ಕಮಗಳೂರು: ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ಮಗ ನದಿಗೆ ಬಿದ್ದು ಸಾವನ್ನಪ್ಪಿ ಮೃತದೇಹ ಪತ್ತೆಯಾಗುವ ಮುನ್ನವೇ ಮನನೊಂದು ತಾಯಿಯು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ( ಜು.24) ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ರವಿಕಲಾ ಎಂದು ಗುರುತಿಸಲಾಗಿದೆ.

ಇವರ ಮಗ ಶಮಂತ್ ಎಂಬವನು ಜೀಪ್‌ ಚಾಲಕರಾಗಿದ್ದರು. ತೀವ್ರ ಮಳೆಯ ಹಿನ್ನಲೆ ಜೀಪ್‌ ಚಾಲಯಿಸುತ್ತಿದ್ದ ಶಮಂತ್‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದ್ದಾನೆ. ವಿಪರೀತ ಮಳೆ ಜೀಪನ್ನು ಮೇಲಕ್ಕೆತ್ತುವ ಕಾರ್ಯಚರಣೆಗೂ ಅಡ್ಡಿಪಡಿಸಿತ್ತು. ಈ ವಿಚಾರ ತಿಳಿದು ಆಘಾತಗೊಂಡ ತಾಯಿ ಮಗನ ಮೃತದೇಹ ಸಿಗುವ ಮುನ್ನವೇ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *