ನೀರುಮಾರ್ಗ : ಹೈನುಗಾರ ಜೋಸೆಫ್ ಸ್ಟ್ಯಾನಿ ಪ್ರಕಾಶ್ ಅವರ 7 ದನಗಳು 10 ದಿನಗಳ ಅಂತರದಲ್ಲಿ ಸಾವನಪ್ಪಿದ್ದು ಹಲವಾರು ಅನುಮಾನ ಹುಟ್ಟಿಹಾಕಿತ್ತು . ಇದೀಗ ಕಲುಷಿತ ಆಹಾರ ಸೇವನೆಯೇ ಕಾರಣ ಎಂದು ಪರೀಕ್ಷಾ ವರದಿಯಲ್ಲಿ ದೃಢ ಪಟ್ಟಿದೆ.

ಯಾವುದೇ ವಿಷದ ಅಂಶಗಳು ಇರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿಲ್ಲ ಎಂದು ಪಶುಪಾಲನ ಇಲಾಖೆ ಉಪನಿರ್ದೇಶಕ ಡಾ| ಅರುಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ದನಗಳಿಗೆ ವಿಷವುಣಿಸಿರುವ ಬಗ್ಗೆ ಪ್ರಕಾಶ್ ಅವರು ಶಂಕೆ ವ್ಯಕ್ತಪಡಿಸಿದ್ದರು. ಮನೆಗೆ ಭೇಟಿ ನೀಡಿದ ಪಶು ವೈದ್ಯರು ದನ ಮೇಯ್ದ ಆಹಾರದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದರು. ಕಲುಷಿತ ಆಹಾರದಿಂದ ದನಗಳು ಸಾವನಪ್ಪಿದೆ ಎಂದು ತಿಳಿದುಬಂದಿದೆ.

