ಬಂಟ್ವಾಳ: ಸಿದ್ಧಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ನವೀನ್ ಹೆಗ್ಡೆ ಮಂಚಕಲ್ಲು ಹಾಗೂ 2ನೇ ಅವಧಿಯ ವೃತ್ತಿಪರ ನಿರ್ದೇಶಕರಾಗಿ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಆಯ್ಕೆಯಾಗಿದ್ದಾರೆ.

ಸಿದ್ದಕಟ್ಟೆ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ವಿವರ ಮಂಡಿಸಿ ಬಳಿಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಇವರನ್ನು ಆಯ್ಕೆ ಮಾಡಲಾಯಿತು.




