ಸೆ. 22-30 – ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

ಕಣಿಯೂರು: ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರ ಕಣಿಯೂರಿನಲ್ಲಿ ಸೆ.22 ರಿಂದ 30ರ ತನಕ ನವರಾತ್ರಿ ಮಹೋತ್ಸವ ನಡೆಯಲಿದೆ.

ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ವೇ. ಮೂ. ನಡಿಬೈಲು ಶಂಕರನಾರಾಯಣ ಭಟ್‌ ಇವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಸೆ.22ರಂದು ಶ್ರೀ ದೇವಿಗೆ ಮಹಾಪೂಜೆ ನಡೆದು ಸೆ. 24ರ ಸಂಜೆ ಸತ್ಯನಾರಾಯಣ ಪೂಜೆ ನಡೆಯಲಿದೆ.

ಸೆ. 28ರಂದು ಬೆಳಿಗ್ಗೆಯಿಂದ ಚಂಡಿಕಾ ಹೋಮ , ಬಳಿಕ 10:45ರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ.

ಸೆ.30ರಂದು ರಾತ್ರಿ ಶ್ರೀ ದೇವಿಗೆ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *