Breaking
10 May 2026, Sun

ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಕಟ ಮತ್ತು ಕಮಿಟಿ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದ ಬಂಟ್ಟಾಳದ ಬಾಲಕಿ ತನಿಷ್ಕ

ಬಂಟ್ವಾಳ: ತಾಲೂಕಿನ ಬಾಲಕಿಯೊಬ್ಬಳು ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಕಟ ಮತ್ತು ಕಮಿಟಿ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಕೂರಿಯಾಳದ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ ತನಿಷ್ಕ ಪವನ್ ಕುಮಾರ್ ಚಿನ್ನದ ಪದಕವನ್ನು ಪಡೆದುಕೊಂಡ ಬಾಲಕಿಯಾಗಿದ್ದಾಳೆ.

ಈಕೆ ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಪೋಷಕರು ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಬುಡಕೊನ್ ಕರಾಟೆ ಮಾರ್ಷಯಲ್ ಆರ್ಟ್ ನ ಕೋಚ್ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ತನಿಷ್ಕ ಪವನ್ ಕುಮಾರ್ ಅವರು ತರಬೇತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *