ಬಂಟ್ವಾಳ : ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಕೊಟ್ಟಾಗ ಮಾತ್ರ ನಾವು ಋಣಮುಕ್ತರಾಗಿ ಬಾಳಬಹುದು ಎಂದು ವಿವೇಕಾನಂದ ವಿದ್ಯಾ ಸಂಸ್ಥೆ ಪುತ್ತೂರು ಇಲ್ಲಿನ ಮೀನಾಕ್ಷಿ ಮಾತಾಜಿಯವರು ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆ ಕಡ್ತಾಲಬೆಟ್ಟು ಇಲ್ಲಿ EDRT ಸಂಸ್ಥೆಯ ವತಿಯಿಂದ 2025-26 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ನೀಡಲಾದ ಲೇಖನ ಪುಸ್ತಕ, ಬ್ಯಾಗ್ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ರತ್ನಾಕರ್ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಮ ಶೆಟ್ಟಿ, ಹರೀಶ್ ಆಚಾರ್ಯ ರಾಯಿ, ಪೋಷಕರಾದ ಪುರಂದರ ಶೆಟ್ಟಿ ಮತ್ತು ಸುನೀತಾ ಭಾಗವಹಿಸಿದ್ದರು .ಸಹಶಿಕ್ಷಕಿಯರಾದ ಗಾಯತ್ರಿ, ಸೌಂದರ್ಯ, ಅಕ್ಷತಾ ಹಾಗೂ ಪೋಷಕರೆಲ್ಲರೂ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಭಾಸ್ಕರ ಪಿ ಕೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕರಾದ ಹರಿಪ್ರಸಾದ್ ರಾವ್ ನಿರೂಪಿಸಿ, ವಂದಿಸಿದರು.


