ಹೊಕ್ಕಾಡಿಗೋಳಿ: ಹಿಂದೂ ಜಾಗರಣ ವೇದಿಕೆ ಆರಂಬೋಡಿ ಎಲಿಯನಡುಗೋಡು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 40ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆಯು ಶ್ರೀನಿವಾಸ್ ಶೆಟ್ಟಿಗಾರ್ ಸಭಾಂಗಣ ಹೊಕ್ಕಾಡಿಗೋಳಿ ಕೂಡುರಸ್ತೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆ ಯನ್ನು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಣೀತ್ ಹಿಂಗಾಣಿ ವಹಿಸಿ ದರು.
ಈ ವರ್ಷ 40ನೇ ವರ್ಷದ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಎರಡು ದಿನ ವಿವಿಧ ಧಾರ್ಮಿಕ,ಸಾಂಸ್ಕೃತಿಕ,ಕಾರ್ಯಕ್ರಮ ಗಳೊಂದಿಗೆ ಜರಗಲಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಭಾರೀ ಪ್ರತಿ ವರ್ಷದಂತೆ ಶ್ರೀ ಕೃಷ್ಣ ದೇವರ ಪೂಜೆಯೊಂದಿಗೆ, ಧ್ವಜಾರೋಹಣ, ನಂತರ ರಕ್ಷಾ ಬಂಧನ, ಬೌದಿಕ್, ವಿವಿಧ ಮಂಡಳಿ ಗಳಿಂದ ಭಜನೆ, ಮದ್ಯಾಹ್ನ ಅನ್ನ ಸಂತರ್ಪಣೆ, ವಿವಿಧ ಆಟೋಟ ಸ್ಪರ್ಧೆ ಗಳು,ಅಲ್ಲದೆ ವಿವಿಧ ವಿನೋದವಲಿಗಳೊಂದಿಗೆ ಮೆರವಣಿಗೆ, ನಂತರ ಸುಪ್ರಸಿದ್ದ ಕಲಾವಿದರಿಂದ ನಾಟಕ ಜರುಗಲಿದೆ.
ಹಾಗೆಯೇ ಕಳೆದ 40 ವರ್ಷಗಳಿಂದ ಸಂಘಟನೆಯಲ್ಲಿ ದುಡಿದ ಸಂಘಟಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಸುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಗೌರವಧ್ಯಕ್ಷರು,ಮೊಸರು ಕುಡಿಕೆ ಉತ್ಸವ ಸಮಿತಿಯ ಜವಾಬ್ದಾರಿ ಯುತ ಪದಾಧಿಕಾರಿಗಳು,ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರು ಗಳು,ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘ ದ ನಿರ್ದೇಶಕರು,ವಿವಿಧ ಭಜನಾ ಮಂಡಳಿಯ ಪದಾಧಿಕಾರಿಗಳು, ಸಂಘ ಸಂಸ್ಥೆ ಯ ಪದಾಧಿಕಾರಿಗಳು,ಉಪಸ್ಥಿತರಿದ್ದರು.

