ಕಿನ್ನಿಗೋಳಿ: ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಮಗು ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಟೀಲು ಕಡೆಯಿಂದ ಕುಂದಾಪುರದ ಕಡೆಗೆ ತೆರಳುತ್ತಿದ್ದ ಕಾರು ಮೂಲ್ಕಿಯಿಂದ ಅತಿ ವೇಗದಿಂದ ಬಂದ ಕಾರು ಹೆದ್ದಾರಿಯ ಹೊಂಡ ತಪ್ಪಿಸಲು ಯತ್ನಿಸಿದ್ದಾಗ ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಎರಡೂ ಕಾರುಗಳು ಪಲ್ಟಿಯಾಗಿದ್ದು, ಸಂಪೂರ್ಣ ಜಖಂಗೊಂಡಿವೆ.

ಈ ಅಪಘಾತದಲ್ಲಿ ಕುಂದಾಪುರ ತೆಕ್ಕಟ್ಟೆ ನಿವಾಸಿಗಳಾದ ನಿತಿಲ್ (25), ಅವಿನಾಶ್(23), ಮಗು ಮೃತ್ವಿನ್ (2) ಗಾಯಗೊಂಡಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ಮುಲ್ಕಿ ಮೂಲದ ಮೂವರು ಯುವಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಗಾಯಾಳುಗಳನ್ನು ತಕ್ಷಣವೇ ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



