Breaking
10 Nov 2026, Tue

ಜಕ್ರಿಬೆಟ್ಟಿನಲ್ಲಿ ರಿಕ್ಷಾ–ಲಾರಿ ಡಿಕ್ಕಿ: ಇಬ್ಬರಿಗೆ ಗಾಯ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಗೆ ರಿಕ್ಷಾ ಪ್ರವೇಶಿಸುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಗುರುವಾರ (ಸೆ.24) ಬಂಟ್ವಾಳದ ಜಕ್ರಿಬೆಟ್ಟು ಬಳಿ ನಡೆದಿದೆ.

ಅಪಘಾತದಲ್ಲಿ ರಿಕ್ಷಾ ಚಾಲಕ ಜೇಮ್ಸ್ ಮಾರ್ಟಿಸ್ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಮ್ಮದ್ ಸಿನಾನ್ ಗಾಯಗೊಂಡಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬಂಟ್ವಾಳ ಪೇಟೆಯಿಂದ ಬೆಳ್ತಂಗಡಿ ಕಡೆಗೆ ರಿಕ್ಷಾದಲ್ಲಿ ಟಯರ್‌ಗಳನ್ನು ಸಾಗಿಸಲಾಗುತ್ತಿತ್ತು. ಬೈಕ್ ಕಂಪೆನಿಯೊಂದಕ್ಕೆ ಟಯರ್‌ಗಳನ್ನು ತಲುಪಿಸುವ ಸಲುವಾಗಿ ರಿಕ್ಷಾದ ಹಿಂಬದಿಯ ಸೀಟನ್ನು ಮಡಚಿ ಟಯರ್‌ಗಳನ್ನು ತುಂಬಲಾಗಿತ್ತು. ಟಯರ್‌ಗಳ ಸಾಗಣೆಯ ಜವಾಬ್ದಾರಿ ಹೊಂದಿದ್ದ ಮಹಮ್ಮದ್ ಸಿನಾನ್ ಅವರು ಚಾಲಕ ಜೇಮ್ಸ್ ಮಾರ್ಟಿಸ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು.

ಜಕ್ರಿಬೆಟ್ಟು ಬಳಿ ರಿಕ್ಷಾ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಸಂದರ್ಭ, ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದಲ್ಲಿದ್ದ ಇಬ್ಬರಿಗೂ ಗಾಯಗಳಾಗಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *