Breaking
25 Sep 2026, Fri

ಬೆಳ್ತಂಗಡಿ: 1,000 ಚ.ಮೀ.ವರೆಗಿನ ಸಿಂಗಲ್ ಪ್ಲಾಟ್ ನಕ್ಷೆ ಮಂಜೂರಾತಿ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ

ಬೆಳ್ತಂಗಡಿ: 1,000 ಚದರ ಮೀಟರ್‌ವರೆಗಿನ ಸಿಂಗಲ್ ಪ್ಲಾಟ್ ನಕ್ಷೆ ಮಂಜೂರಾತಿ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳ ಹಂತಕ್ಕೆ ವಿಕೇಂದ್ರೀಕರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ತಿಳಿಸಿದೆ.

ಸೆ.24ರಂದು ಹೊರಡಿಸಿರುವ ನೂತನ ಅಧಿಸೂಚನೆಯಂತೆ, ಮಹಾನಗರ ಪಾಲಿಕೆಗಳ ವಲಯ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ನಕ್ಷೆ ಮಂಜೂರಾತಿ ಅಧಿಕಾರ ನೀಡಲಾಗಿದೆ.

ನಕ್ಷೆ ಮಂಜೂರಾತಿ ಹಾಗೂ ಲೇಔಟ್ ಪ್ಲಾನ್ ಅನುಮತಿಗಾಗಿ ಸಾರ್ವಜನಿಕರು ವಿವಿಧ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಲು ಬಿಜೆಪಿ ನಿರಂತರವಾಗಿ ಹೋರಾಟ ನಡೆಸಿತ್ತು. ಈ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಕಟಣೆ ತಿಳಿಸಿದೆ.

ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾಗುವ ಸಾಮಾನ್ಯ ನಾಗರಿಕರು ಹಾಗೂ ಸಣ್ಣ ಆಸ್ತಿ ಮಾಲೀಕರಿಗೆ ಈ ನಿರ್ಧಾರದಿಂದ ಅನುಕೂಲವಾಗಲಿದೆ ಎಂದು ಬಿಜೆಪಿ ತಿಳಿಸಿದೆ.

ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *